ವಸುಂಧರಾಗೆ ಜೀವಮಾನ ಸಾಧನೆ ಪ್ರಶಸ್ತಿ

ವಿಜಯಪುರ: ಸಾರ್ವಜನಿಕ ಹಾಗೂ ಸಮಾಜಸೇವೆ ಪರಿಗಣಿಸಿ ವಸುಂಧರಾ ಮನೋಹರ ಐನಾಪುರ ಅವರಿಗೆ ಪುಣೆಯ ಫೆಡರೇಶನ್ ಆಫ್ ಗ್ಲೋಬಲ್ ಪೀಸ್ ಫೌಂಡೇಶನ್ ಆ್ಯಂಡ್ ಡೆವಲಪ್‌ಮೆಂಟ್ ಸಂಘಟನೆ ಜೀವನಾನದ ಸಾಧನೆ ಪ್ರಶಸ್ತಿ (ಲೈಫ್‌ಟೈಂ ಅಚ್ಯುಮೆಂಟ್ ಅವಾರ್ಡ್) ಪ್ರದಾನ ಮಾಡಿದೆ.

ಇತ್ತೀಚೆಗೆ ವಿಜಯಪುರದ ಐನಾಪುರ ಅವರ ನಿವಾಸಕ್ಕೆ ಆಗಮಿಸಿದ್ದ ಪುಣೆಯ ಫೇಡರೇಶನ್ ಆ್ ಗ್ಲೋಬಲ್ ಪೀಸ್ ಫೌಂಡೇಶನ್ ಆ್ಯಂಡ್ ಡೆವಲಪ್‌ಮೆಂಟ್ ಪದಾಧಿಕಾರಿಗಳು ವಸುಂಧರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮನೋಹರ ಐನಾಪುರ, ಚಲನಚಿತ್ರ ನಟ ರಾಹುಲ್ ಐನಾಪುರ, ರೋಹನ್ ಐನಾಪುರ, ಚಂದ್ರಕಾಂತ ಜಾಧವ ಮತ್ತಿತರರು ಉಪಸ್ಥಿತರಿದ್ದರು.