200 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ವಿಜಯಪುರ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಒಟ್ಟು 450 ಪ್ಲಾಸ್ಟಿಕ್ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿದ್ದಾಗ ದೇವರಹಿಪ್ಪರಗಿ ಬಳಿ ಅಧಿಕಾರಿಗಳು ಅಕ್ಕಿ ತುಂಬಿದ ಲಾರಿ ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶ ಮೂಲದ ಹೇಮರಾಜ ದಿಲೀಪಸಿಂಗ್ ಯುವನೆ, ದೀಪಕ ಬಯಲಾಲ ದುರ್ವೆ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಲಾರಿಯಲ್ಲಿರುವ 450 ಅಕ್ಕಿ ಚೀಲಗಳಲ್ಲಿದ್ದ 200 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದಿದ್ದು ಆಹಾರ ಇಲಾಖೆ ನಿರೀಕ್ಷಕ ಮಹಾದೇವಪ್ಪ ಹಳ್ಳೂರ ದೇವರಹಿಪ್ಪರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *