ವಿಜಯಪುರ: ವಿ.ಎಚ್. ನಾಗರಹಳ್ಳಿ ಸ್ಮರಣಾರ್ಥ ಭಗವದ್ಗೀತಾ ಪ್ರಸಾರ ಪ್ರತಿಷ್ಠಾನ ಸಹಯೋಗದಲ್ಲಿ ಪಿಡಿಜೆ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಂಠಪಾಠ ಸ್ಪರ್ಧೆಯಲ್ಲಿ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿನುತಾ ನಿಡೋಣಿ ಉತ್ತಮ ಪ್ರದರ್ಶನ ನೀಡಿ ಪ್ರೋತ್ಸಾಹಕರ ಬಹುಮಾನ ಪಡೆದಿದ್ದಾಳೆ. ಪ್ರಸನ್ನ ಬಿಳೂರ, ಅಂಕಿತಾ ತಳವಾರ, ತನ್ವಿ ಮನ್ನೀಕೇರಿ, ಶ್ರೇಯಸ್ ನಾವಿ, ಪವನ ಖಂಡೆಕಾರ, ಸಂಜೀವಿನಿ ಮುರಡಿ, ಸ್ನೇಹಾ ಮೆಟಗಾರ, ಬಾಪುಗೌಡ ಮೇಟಿ, ದಿವ್ಯಾ ಬಿರಾದಾರ, ಸಂಗನಗೌಡ ಬಿರಾದಾರ, ಅನುಪಮ ಬೆಳ್ಳುಬ್ಬಿ, ಮಹಾದೇವಿ ಪಾಟೀಲ, ವೈಷ್ಣವಿ ಪಾಟೀಲ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಚೇರ್ಮನ್ ಬಸವರಾಜ ಕೌಲಗಿ, ಗೌರವ ನಿರ್ದೇಶಕ ರಾಜಶೇಖರ ಕೌಲಗಿ, ಮುಖ್ಯಶಿಕ್ಷಕ ಎಂ.ಐ. ಬಿರಾದಾರ, ಸಪ್ನಾ ನರಸಲಗಿ, ಜೆ.ಆರ್. ಗುಡ್ಡದ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.