ಕಿಡ್ನಿ ಕಸಿ ಶಸಚಿಕಿತ್ಸೆ ಯಶಸ್ವಿ

ವಿಜಯಪುರ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮೂತ್ರಪಿಂಡ (ಕಿಡ್ನಿ) ಕಸಿ ಶಸಚಿಕಿತ್ಸೆ ಯಶಸ್ವಿಯಾಗಿದೆ ಎಂದು ಯಶೋಧರಾ ಆಸ್ಪತ್ರೆ ಮುಖ್ಯಸ್ಥ ಡಾ. ಬಸವರಾಜ ಕೊಳ್ಳೂರ ಹೇಳಿದರು.

ಇದೊಂದು ಅಪರೂಪದ ಶಸ ಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ. ಜಿಲ್ಲೆಯ ವೈದ್ಯಕೀಯ ಇತಿಹಾಸದಲ್ಲಿ ದಾಖಲೆ ಬರೆದಂತಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಿಡ್ನಿ ಕಸಿ ಶಸ ಚಿಕಿತ್ಸೆ ಮಾಡುವ ಆಸ್ಪತ್ರೆಗಳ ಸಂಖ್ಯೆ ವಿರಳ. ಗಡಿಭಾಗದ ಜಿಲ್ಲೆಗಳ ರೋಗಿಗಳು ಮಹಾರಾಷ್ಟ್ರದ ಸೊಲ್ಲಾಪುರ, ಮಿರಜ್ ಇನ್ನಿತರೆ ಕಡೆಗಳಲ್ಲಿ ಹೋಗುತ್ತಾರೆ. ಮಹಾನಗರಗಳಿಗೆ ಹೋಗಿ ಹೆಚ್ಚು ಹಣ ವ್ಯಯಿಸುವ ಬದಲು ಸ್ಥಳೀಯವಾಗಿ ರೋಗಿಗಳು ಕೈಗೆಟಕುವ ದರದಲ್ಲಿಯೆ ಚಿಕಿತ್ಸೆ ಪಡೆದು ರೋಗಮುಕ್ತರಾಗಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಿಡ್ನಿ ಕಸಿ ಶಸಚಿಕಿತ್ಸೆಗೆ ರಾಜ್ಯದ ಬೆಂಗಳೂರು ಮೊದಲಾದ ಮಹಾನಗರಗಳಿಗೆ ರೋಗಿಗಳು ತೆರಳಬೇಕಾಗುತ್ತಿತ್ತು. ಅದಕ್ಕೆ 10 ರಿಂದ 15 ಲಕ್ಷ ರೂ.ಗಳಷ್ಟು ವೆಚ್ಚವೂ ತಗಲುತ್ತಿತ್ತು. ಆದರೆ ಈ ಕೊರತೆ ನಿವಾರಿಸಿ ವಿಜಯಪುರದಲ್ಲಿಯೇ ಈ ಚಿಕಿತ್ಸೆಯನ್ನು ಕೇವಲ 4 ಲಕ್ಷ ರೂ.ಗಳ ವೆಚ್ಚದಲ್ಲಿ ಮಾಡಲಾಗಿದೆ. ಯಶೋಧರಾ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಲ್ಲಿ ಎರಡು ಕಿಡ್ನಿ ಕಸಿ ಪ್ರಕರಣಗಳಲ್ಲಿ ಶಸ ಚಿಕಿತ್ಸೆ ಯಶಸ್ವಿಯಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೂದೂರು ಎಂಬ ಗ್ರಾಮದ ಯಾಜ್ ಎನ್ನುವ ಬಾಲಕನಿಗೆ ಕಿಡ್ನಿ ವೈಲ್ಯ ಕಾಡಿತ್ತು. ಆತನ ತಂದೆಯ ಕಿಡ್ನಿ ತೆಗೆದು ಇದೀಗ ಬಾಲಕನಿಗೆ ಅಳವಡಿಸಲಾಗಿದೆ. ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕ ಆರೋಗ್ಯವಾಗಿದ್ದಾನೆ. ಯಾವುದೇ ಸಮಸ್ಯೆ ಇಲ್ಲ ಎಂದು ವಿವರಿಸಿದರು.

ಮೂತ್ರಪಿಂಡ ಶಸಚಿಕಿತ್ಸಕ ಡಾ. ಎಸ್.ಬಿ. ಪಾಟೀಲ, ಡಾ. ಹೇಮಂತ ದೇಶಪಾಂಡೆ, ಡಾ. ವಿಜಯ ಶಿವಪೂಜಿ, ಡಾ. ಸಂಜಯ ಗಾಯಕವಾಡ, ಡಾ. ವಿಠ್ಠಲ ಕೃಷ್ಣಾ, ಡಾ. ಮಹೇಶ ಬಾಗಲಕೋಟ, ಡಾ. ರಾಹುಲ್ ಸ್ವಾಮಿ, ಡಾ. ಮಂಜರಿ ದೇಶಪಾಂಡೆ, ಡಾ. ಸಿರೋಜ ಬಾಂಬೇವಾಲಾ ಮೊದಲಾದ ವೈದ್ಯರ ತಂಡ ಈ ಶಸಚಿಕಿತ್ಸೆಯನ್ನು ಕೈಗೊಂಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಪತ್ರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ, ವೈದ್ಯ ಡಾ. ಎಚ್.ಬಿ. ಪಾಟೀಲ, ವಿಜಯ ಚಂದ್ರಾ, ಶರಣ ಮಳಖೇಡಕರ, ಸೋಮನಾಥ ರಾಯಕೋಡ ಮೊದಲಾದವರು ಪಾಲ್ಗೊಂಡಿದ್ದರು.