ಜನಿಸುವ ಮುನ್ನವೇ ಸಂಸ್ಕಾರ

ವಿಜಯಪುರ: ತಾಯಿ ಗರ್ಭಕ್ಕೆ ಲಿಂಗಧಾರಣೆ ಮಾಡಿ, ಮಗು ಜನಿಸುವ ಮುನ್ನ ಅದಕ್ಕೆ ಸಂಸ್ಕಾರ ನೀಡುವ ಪದ್ಧತಿ ಇರುವ ವಿಶ್ವದ ಏಕೈಕ ಧರ್ಮ ಅದು ವೀರಶೈವ ಲಿಂಗಾಯತ ಧರ್ಮ ಎಂದು ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ನಗರದ ಕರ್ಪೂರಮಠದಲ್ಲಿ ಡಾ.ಮಹೇಶ್ವರನಾಥ ಸ್ವಾಮಿಗಳ ಧರ್ಮಾಧಿಕಾರ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಡಗಂಚಿ ಸಂಸ್ಥಾನಮಠದ ವೀರಭದ್ರ ಶಿವಾಚಾರ್ಯರು ಡಾ.ಮಹೇಶ್ವರನಾಥ ಸ್ವಾಮಿಗಳಿಗೆ ಧರ್ಮಾಧಿಕಾರದ ದೀಕ್ಷೆ ನೀಡಿದರು.

ಕರ್ಪೂರಮಠದ ನೂತನ ಧರ್ಮಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಮಹೇಶ್ವರನಾಥ ಸ್ವಾಮೀಜಿ ಮಾತನಾಡಿ, ಕರ್ಪೂರಮಠವು ಉಜ್ಜಯನಿ ಪರಂಪರೆ ಮಠವಾಗಿದ್ದು, ಈ ಮಠದ ಪರಂಪರೆಯಂತೆ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಕೊಡುಗೆ ಕೊಡುತ್ತೇವೆ ಎಂದು ಹೇಳಿದರು.

ತಡವಲಗಾದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಚಡಚಣದ ಷಡಕ್ಷರಿ ಶಿವಯೋಗಿಗಳು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವ0ೋಗಿ ಶಿವಾಚಾರ್ಯರು, ಯರನಾಳದ ಸಂಗನಬಸವ ಶಿವಯೋಗಿಗಳು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶಾಂತಪ್ಪ ಜ್ತಿ, ಜಗನು ಮಹಾರಾಜರು ಮತ್ತಿತರರು ಉಪಸ್ಥಿತರಿದ್ದರು. ಡಾ.ಚಂದ್ರಶೇಖರ ನಾಗರಾಳಮಠ ನಿರೂಪಿಸಿ, ವಂದಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *