ಜಮೀನು ಮರು ಮಂಜೂರಿಗಾಗಿ ಡಿಸಿಗೆ ಮನವಿ

ವಿಜಯಪುರ: ಪಾಲಿಕೆ ಹದ್ದಿನಲ್ಲಿರುವ ಸಿ.ಟಿ.ಎಸ್.ನಂ.1769 ಪ್ಲಾಟ್ ನಂ. 27ರಲ್ಲಿ ಬರುವ ಕಟ್ಟಿಗೆ ಅಡ್ಡೆ ಜಾಗ 50 ವರ್ಷಗಳ ಹಿಂದೆ ಬಾಷಾಸಾಬ ಉರ್ ಬುಡ್ಡೆಸಾಬ ಹುನಗುಂದ ಅವರಿಗೆ ಮಂಜೂರಾಗಿದ್ದು, ಅವತ್ತಿನಿಂದ ಈವರೆಗೆ ಯಾರಿಗೂ ಲೀಸ್ ಕೊಡದೇ ಆ ಜಾಗದಲ್ಲಿ ಬಾಷಾಸಾಬ ಅವರ ಕುಟುಂಬ ವ್ಯವಹಾರ ಮಾಡಿಕೊಂಡು ಬಂದಿದೆ.

2018ರಲ್ಲಿ ಸಂತೋಷ ಪೋಳ ಹಾಗೂ ಪ್ರಕಾಶ ಮಿರ್ಜಿ ಅವರು ಆ ಜಾಗವನ್ನು ಇನ್ನೊಬ್ಬರ ಹೆಸರಿಗೆ ಮಾಡಿ ಲಾಭ ಪಡೆಯುತ್ತಿದ್ದಾರೆ. ಕೂಡಲೇ ಆ ಖೊಟ್ಟಿ ಲೀಸ್‌ನ್ನು ರದ್ದು ಪಡಿಸಿ, ಇಮ್ತಿಯಾಜ್ ಹುನಗುಂದ ಅವರಿಗೆ ಜಾಗ ಪುನಃ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ನ್ಯಾಯವಾದಿ ಎಂ.ಎ.ಎಸ್. ಇನಾಮದಾರ್ ಮನವಿ ಸಲ್ಲಿಸಿದರು. ಕೂಡಲೇ ಪಾಲಿಕೆ ಸದಸ್ಯರ ವಿರುದ್ಧ ಕ್ರಮ ಜರುಗಿ, ಜಾಗವನ್ನು ಹುನಗುಂದ ಅವರಿಗೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಒಂದು ವೇಳೆ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇಮ್ತಿಯಾಜ್ ಹುನಗುಂದ, ರಿಜವಾನ್ ಮುಲ್ಲಾ, ಅಬಿದ್ ಮುಲ್ಲಾ, ಆಸೀಫ್ ಪಟೇಲ, ಸಮೀರ್ ಅಥಣಿಕರ ಸೇರಿದಂತೆ ಮತ್ತಿತರರು ಉಪಸ್ಥಿತರದ್ದರು.