More

    ಭಾರತೀಯ ಸಂಸ್ಕೃತಿ ಉಳಿಸಿ-ಬೆಳೆಸಿ

    ವಿಜಯಪುರ : ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜನಪದ ತಜ್ಞ ಡಾ.ಎಂ.ಎಂ. ಪಡಶೆಟ್ಟಿ ಹೇಳಿದರು.

    ಇಲ್ಲಿನ ವೀರಶೈವ ಮಹಾಸಭಾದ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಎಂ.ಎನ್.ವಾಲಿ ಪ್ರತಿಷ್ಠಾನದ 9ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

    ಜಾನಪದ ಅಕಾಡೆಮಿ ಮಾಜಿ ಸದಸ್ಯ ಪ್ರಕಾಶ ಅಂಗಡಿ ಮಾತನಾಡಿ, ಜನಪದ ಸಾಹಿತ್ಯವನ್ನು ಅನಾವರಣಗೊಳಿಸಿದ ಶ್ರೇಯಸ್ಸು ಜಿಲ್ಲೆಯ ಹಲಸಂಗಿ ಗೆಳೆಯರ ಬಳಗಕ್ಕೆ ಸಲ್ಲುತ್ತದೆ ಎಂದರು.

    ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಜಾನಪದ ಕಲಾವಿದರಿಂದ ಜನಪದ ಕಲಾ ಪ್ರದರ್ಶನ ಜರುಗಿತು. ಕಲಾವಿದರು ಜನಪದ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಚಿಸಿದರು. ಗೋಂದಳಿ ಪದ ಹಾಡಿದ ಯಲ್ಲಪ್ಪ ಗೋಂದಳಿ, ತತ್ವಪದ ಹಾಡಿದ ಡಾ.ಶಾಂತು ಕೋಟಿ, ಭಜನಾಪದ ಹಾಡಿದ ಷಣ್ಮುಖಪ್ಪ ದೇವೂರ ಮತ್ತು ಪ್ರಭಾವತಿ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಮರೇಶ ಸಾಲಕ್ಕಿ, ಪ್ರೊ.ದೊಡ್ಡಣ್ಣ ಭಜಂತ್ರಿ, ಅಶೋಕ ಅಂಬಾಜಿ, ಡಾ.ಸೋಮಶೇಖರ ವಾಲಿ, ಶಂಕರಗೌಡ ಪಾಟೀಲ, ಡಾ.ಬಿ.ಎಸ್. ಪಡಗಾನೂರ, ಮ.ಗು.ಯಾದವಾಡ, ಡಾ.ಎಂ.ಎನ್.ವಾಲಿ, ವಿ.ಸಿ. ನಾಗಠಾಣ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts