ಭ್ರೂಣಲಿಂಗ ಪತ್ತೆ-ಹತ್ಯೆ ಕಂಡಲ್ಲಿ ಕಠಿಣ ಕ್ರಮ

ವಿಜಯಪುರ: ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನದ ದಿಸೆಯಲ್ಲಿ ಜಿಲ್ಲಾದ್ಯಂತ ಗರ್ಭಪಾತದಂಥ ಅಕ್ರಮ ಚಟುವಟಿಕೆ ನಿಯಂತ್ರಿಸಲು ಸೀ ಹಾಗೂ ಪ್ರಸೂತಿ ತಜ್ಞ ವೈದ್ಯರ ಸಲಹೆ ಇಲ್ಲದೇ ಔಷಧ ಅಂಗಡಿಗಳಲ್ಲಿ ಗರ್ಭಪಾತಕ್ಕೆ ಸಂಬಂಧಪಟ್ಟ ಮಾತ್ರೆಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಮಾ.26, 2019 ರಂದು ನಡೆದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಅಧಿನಿಯಮ 1994ರನ್ವಯ ರಚಿಸಲಾದ (ಪಿಸಿಪಿಎನ್‌ಡಿಟಿ) ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿ ಸಭೆಗಳಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಗರ್ಭಪಾತಕ್ಕೆ ಸಂಬಂಧಪಟ್ಟಂತೆ ಮಿಸೋ ಪ್ರಿಸ್ಟಾನ್, ಮಿಟೆ ಪ್ರಿಸ್ಟಾನ್, ಎಂಟಿಪಿ ಕಿಟ್ಸ್‌ಗಳನ್ನು ಡ್ರಗಿಸ್ಟ್, ಕೆಮಿಸ್ಟ್‌ಗಳಾಗಲೀ, ಔಷಧ ಅಂಗಡಿಗಳಲ್ಲಿ ಮಾರಾಟ ಮಾಡದಂತೆ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಸಹ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿನ್ನಲೆಯಲ್ಲಿ ಸೀ ಹಾಗೂ ಪ್ರಸೂತಿ ವೈದ್ಯರು ಮಾತ್ರ ಅವಶ್ಯಕತೆಗನುಗುಣವಾಗಿ ತಮ್ಮ ಓಪಿಡಿ ಕ್ಲಿನಿಕ್‌ಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳ ಪರೀಕ್ಷೆ ನಡೆಸಿ, ಅವಶ್ಯಕತೆಗೆ ಅನುಗುಣವಾಗಿ ಔಷಧಗಳನ್ನು ಉಪಯೋಗಿಸಬಹುದಾಗಿದೆ. ಅದರಂತೆ ತಜ್ಞ ವೈದ್ಯರ ಸಲಹೆವಿಲ್ಲದೆ ಮಾರಾಟ ಮಾಡುತ್ತಿರುವುದು ಮತ್ತು ನಿಗದಿತ ಬೆಲೆಗಿಂತ ಆರು ಪಟ್ಟು ಹೆಚ್ಚಿನ ದರದಲ್ಲಿಯೂ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅದರಂತೆ ಜಿಲ್ಲೆಯಲ್ಲಿರುವ 107 ಸೀ ಮತ್ತು ಪ್ರಸೂತಿ ಆಸ್ಪತ್ರೆಗಳ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಅಳವಡಿಸಿ ಆಸ್ಪತ್ರೆಗೆ ಆಗಮಿಸುವ ಸಂಶಯಾಸ್ಪದ ಪ್ರಕರಣಗಳ ಪತ್ತೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಸಿಸಿಟಿವಿ ನಿಯಂತ್ರಣಾ ಕೊಠಡಿಯಿಂದಲೇ ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತಂತೆ ಅವಶ್ಯಕ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಭ್ರೂಣಲಿಂಗವನ್ನು ಅನಧಿಕೃತವಾಗಿ ಪತ್ತೆ ಮಾಡುವುದಾಗಲಿ, ಭ್ರೂಣಲಿಂಗ ಹತ್ಯೆ ಮಾಡುವುದಾಗಲಿ ಕಾನೂನಿನ ರಿತ್ಯ ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಗರ್ಭಪಾತ ನಿಯಂತ್ರಿಸಲು ಅನುಕೂಲವಾಗುವಂತೆ ಮುಂಬರುವ ದಿನಗಳಲ್ಲಿ ಸೀ ರೋಗ ತಜ್ಞರಿಗೆ ಸಭೆಯೊಂದನ್ನು ಆಯೋಜಿಸಿ ಸೂಕ್ತ ಅರಿವನ್ನು ಸಹ ಮೂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಎಸ್‌ಪಿ ಪ್ರಕಾಶ ನಿಕ್ಕಂ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಹೇಶ ಕ್ಯಾತನ್, ಡಿಎಚ್‌ಒ ಡಾ.ಮಹೇಂದ್ರ ಕಾಪ್ಸೆ ಉಪಸ್ಥಿತರಿದ್ದರು.

ಜಿಲ್ಲಾದ್ಯಂತ ನಡೆಯುವ ಅನಧಿಕೃತ ಭ್ರೂಣ ಲಿಂಗ ಪತ್ತೆಯನ್ನು ನಿಯಂತ್ರಿಸಲು ಮಗುವಿನ ಆರೋಗ್ಯ ತಪಾಸಣೆಗೆ ಇರುವ ಸ್ಕಾೃನಿಂಗ್ ಯತ್ರಗಳಲ್ಲಿ ವಿಶೇಷವಾದ ಸ್ಟಾವೇರ್‌ವೊಂದನ್ನು ಅಭಿವೃದ್ಧಿಪಡಿಸಿ ಭ್ರೂಣಲಿಂಗ ಪತ್ತೆ ಮಾಡುವ ಚಿತ್ರವು ನೇರವಾಗಿ ನಿಯಂತ್ರಣ ಸ್ಥಳಕ್ಕೆ ಲಭ್ಯವಾಗುವಂಥ ವ್ಯವಸ್ಥೆ ಜಾರಿಗೊಳಿಸುವ ಅವಶ್ಯಕತೆ ಇದೆ. ಈ ಕುರಿತಂತೆ ಸ್ಕಾೃನಿಂಗ್ ಯಂತ್ರ ತಯಾರಿಸುವ ಕಂಪನಿಗಳೊಂದಿಗೆ ಚರ್ಚಿಸಬೇಕು. ಅದರಂತೆ ಬಯೋ ಮೆಡಿಕಲ್ ಇಂಜಿನೀಯರ್ ಮೂಲಕ ಸ್‌ಟಾವೇರ್ ಅಳವಡಿಕೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಪರಿಶೀಲನಾತ್ಮಕ ವರದಿ ಸಲ್ಲಿಸಬೇಕು.
ವಿಕಾಸ ಕಿಶೋರ ಸುರಳಕರ, ಜಿಪಂ ಸಿಇಒ