ಸಿಇಟಿ, ನೀಟ್ ತರಬೇತಿ ಶಿಬಿರ ಉದ್ಘಾಟನೆ

ವಿಜಯಪುರ: ಎಲ್ಲ ಕ್ಷೇತ್ರಗಳಿಗೂ ವ್ಯಕ್ತಿಗಳನ್ನು ಕೊಡುವ ಕ್ಷೇತ್ರ, ಶಿಕ್ಷಣ ಕ್ಷೇತ್ರ. ಅಂಥ ಶಿಕ್ಷಣ ಕ್ಷೇತ್ರದಲ್ಲಿ ಉಚಿತ ತರಬೇತಿ ನೀಡುತ್ತಿರುವ ಎಬಿವಿಪಿ ಕಾರ್ಯ ಶ್ಲಾಘನೀಯ ಎಂದು ಡಿವೈಎಸ್ಪಿ ಡಿ.ಅಶೋಕ ಹೇಳಿದರು.

ನಗರದ ಕುಮದಬೇನ್ ದರ್ಬಾರ್ ಕಾಮರ್ಸ್ ಕಾಲೇಜ್‌ನಲ್ಲಿ ಎಬಿವಿಪಿಯಿಂದ ಹಮ್ಮಿಕೊಂಡಿದ್ದ ಸಿಇಟಿ, ನೀಟ್ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿದ್ಧೇಶ್ವರ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವೆಂಕಟೇಶ ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ರಾಣಿ ಚನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯ ಹಾಗೂ ಪ್ರಾಚಾರ್ಯ ವಿ.ಬಿ.ಗ್ರಾಮಪುರೋಹಿತ ಮಾತನಾಡಿ, ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಹಣ ಕೊಟ್ಟು ಸಿಇಟಿ ತರಬೇತಿ ಪಡೆಯಲು ಸಾಧ್ಯವಿಲ್ಲ. ಥವರಿಗಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. 30 ಕ್ಕೂ ಹೆಚ್ಚು ಅನುಭವಿ ಅಧ್ಯಾಪಕರು ತರಬೇತಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆಯಬೇಕೆಂದು ಹೇಳಿದರು.

ಎಬಿವಿಪಿ ನಗರ ಅಧ್ಯಕ್ಷ ಎಂ.ಎಸ್.ಬಿರಾದಾರ, ಕಲ್ಮೇಶ ಸಾಹುಕಾರ, ಬಸವರಾಜ ಲಗಳಿ, ವಿನೋದ ಮನ್ನವಡ್ಡರ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಎಬಿವಿಪಿ ವಿಭಾಗ ಸಂಚಾಲಕ ಸಚಿನ್ ಕುಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕಾರ್ಯದರ್ಶಿ ಸಚಿನ್ ಬಾಗೇವಾಡಿ ಸ್ವಾಗತಿಸಿದರು. ಶುಭಾ ಹತ್ತಳ್ಳಿ ನಿರೂಪಿಸಿದರು. ಮಾನಸಿ ಕುಲಕರ್ಣಿ ವಂದಿಸಿದರು.