ಜ್ಞಾನಕ್ಕೆ ಬೆಲೆಯಿದೆ ಪದವಿಗಲ್ಲ

ವಿಜಯಪುರ: ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಜೋತು ಬೀಳದೇ, ಸ್ವಾವಲಂಭನೆಯಿಂದ ದೇಶದ ಆರ್ಥಿಕ ಸದೃಢತೆಗೆ ಒತ್ತು ನೀಡಬೇಕೆಂದು ದ್ರಾಕ್ಷಿ ಬೆಳೆೆಗಾರರ ಸಂದ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ಹೇಳಿದರು.

ಕರ್ನಾಟಕ ಆವಿಷ್ಕಾರಗಳ ಮತ್ತು ತಾಂತ್ರಿಕತೆ ಸಂಸ್ಥೆ ಸಹಯೋಗದೊಂದಿಗೆ ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ಯುವಪೀಳಿಗೆ ಹೊಸ ಆವಿಷ್ಕಾರಗಳು ಎಂಬ ಸ್ಟಾರ್ಟಪ್‌ಗಳಿಗಾಗಿ ಹಮ್ಮಿಕೊಂಡಿದ್ದ ಬೂಟ್ ಕ್ಯಾಂಪ್ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ತಾವು ನೌಕರಿ ತ್ಯಜಿಸಿ, ಕೃಷಿ ಪದವಿ ಪಡೆದು ದೊಡ್ಡ ಉದ್ದಿಮೆದಾರರಾಗಿದ್ದು, ಕೃಷಿ ರಂಗದಲ್ಲಿ ಸಾಧನೆಗೈದು ಅನೇಕ ಯುವ ಕೃಷಿಕರಿಗೆ ಮಾದರಿಯಾದ ಕುರಿತು ಮಾತನಾಡಿದರು.

ಕರ್ನಾಟಕದ ಒಂದು ಹತ್ತರಷ್ಟು ಆರ್ಥಿಕತೆ ವಿಜಯಪುರದಿಂದ ಬರುತ್ತದೆ. ವಿದ್ಯಾರ್ಥಿಗಳಿಗೆ ಮಾರುಕಟ್ಟೆ, ಸಂಸ್ಕರಣೆ ಮತ್ತು ರಫ್ತಿನಲ್ಲಿ ವಿಫುಲ ಅವಕಾಶಗಳಿವೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನಮ್ಮ ಒಣಗಿಸಿದ ಲಿಂಬೆಗೆ ಒಳ್ಳೆಯ ಮಾರುಕಟ್ಟೆ ಇದ್ದು, ಯುವ ಸಂಶೋಧನಾ ವಿದ್ಯಾರ್ಥಿಗಳು ಇತ್ತ ಗಮನಹರಿಸಬೇಕೆಂದು ಹೇಳಿದರು.
ಪ್ರಭಾರ ಡೀನ್ ಡಾ.ಎಸ್.ಎಸ್. ಶಿರಹಟ್ಟಿ ಅಧ್ಯಕ್ಷತೆ ವಹಿಸಿ, ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ರೈತರ ಶ್ರಮ ಕಡಿಮೆಯಾಗಿಸುವತ್ತ ಮಾರುಕಟ್ಟೆಯಲ್ಲಿ ವಿಫುಲ ಅವಕಾಶಗಳಿವೆ. ಅದರ ಲಾಭವನ್ನು ಪ್ರತಿಯೊಬ್ಬರು ಪಡೆಯಬೇಕೆಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಭರತಚಂದ ಮತ್ತು ವಿಷ್ಣು ನಾಗರಾಜ ಆಗಮಿಸಿ. ವಿದ್ಯಾರ್ಥಿಗಳು ಯಾವ ರೀತಿ ಪ್ರೋಜೆಕ್ಟ್ ಬರೆದು ಹಣಕಾಸಿನ ನೆರವು ಪಡೆದು ಯುವ ಉದ್ದಿಮೆಗಳಾಗಬೇಕೆಂಬ ತರಬೇತಿ ನೀಡಿದರು.

ಶಿಬಿರದ ಮುಖ್ಯಸ್ಥ ಡಾ.ಯು.ವಿ. ಮುಮ್ಮಿಗಟ್ಟಿ, ಸಂಚಾಲಕ ಡಾ.ಎಂ.ಡಿ. ಪಾಟೀಲ, ಸಂತೋಷ ಬಿರಾದಾರ, ಡಾ.ಆರ್.ಬಿ. ಬೆಳ್ಳಿ, ಡಾ.ಎಸ್.ಎಂ. ವಸದ, ಡಾ. ಅಶೋಕ ಸಜ್ಜನ, ಡಾ.ಎಂ.ಬಿ. ಪಾಟೀಲ, ಡಾ.ಜಗದೀಶ, ಡಾ. ಬಸವರಾಜ ಜಮಖಂಡಿ, ಡಾ.ವಿದ್ಯಾವತಿ ಯಡಹಳ್ಳಿ ಉಪಸ್ಥಿತರಿದ್ದರು. ಅಂದಾಜು ನಾಲ್ಕುನೂರು ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿ ಗುಂಪು ಚಟುವಟಿಕೆ, ಪೇಟೆಂಟ್ ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚಿಸಿದರು.

ವಿದ್ಯಾರ್ಥಿಗಳಿಗೆ ಈಗ ಹಣಕಾಸಿನ ಕೊರತೆ ಇಲ್ಲ. ನಿಮ್ಮ ಬಳಿ ಹೊಸ ಚಿಂತನೆಗಳು ಮತ್ತು ಜ್ಞಾನ ಇದ್ದರೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಜ್ಞಾನಕ್ಕೆ ವಯಸ್ಸು ಇಲ್ಲ. ನಿಮ್ಮ ಹೊಸ ಆವಿಷ್ಕಾರಗಳಿಗೆ ಸರ್ಕಾರ ಗೌರವ ನೀಡುತ್ತದೆ.
ಡಾ.ಎಸ್.ಬಿ. ಕಲಘಟಗಿ, ಸಹ ಸಂಶೋಧನಾ ನಿರ್ದೇಶಕ

Leave a Reply

Your email address will not be published. Required fields are marked *