ನೂತನ ಅಧ್ಯಕ್ಷರಾಗಿ ಖಾಸನೀಸ ಆಯ್ಕೆ

ವಿಜಯಪುರ: ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಚ್. ಖಾಸನೀಸ ಹಾಗೂ ಉಪಾಧ್ಯಕ್ಷರಾಗಿ ಎ.ಎನ್. ರುಣವಾಲ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಆರ್.ಎನ್. ಅಂಡೋಡಗಿ, ಜಂಟಿ ಕಾರ್ಯದರ್ಶಿಯಾಗಿ ಸಿ.ಎ. ಇಂಚಗೇರಿ, ಗ್ರಂಥಾಲಯ ಕಾರ್ಯದರ್ಶಿಯಾಗಿ ಎಸ್.ಎಸ್. ಚೂರಿ, ಆಡಳಿತ ಮಂಡಳಿ ಸದಸ್ಯರಾಗಿ ಬಿ.ಬಿ. ಹಿಪ್ಪರಗಿ, ಕೆ.ಸಿ. ರಾಠೋಡ, ಎಂ.ಆರ್. ಹವಾಲ್ದಾರ, ವಿ.ಎಸ್. ಪಾಟೀಲ ನಾಗರಹಳ್ಳಿ, ಐ.ಬಿ. ಅಳ್ಳಿಗಿಡದ, ಕಚೇರಿ ವ್ಯವಸ್ಥಾಪಕರಾಗಿ ಹೀನಾ ಇಂಡೀಕರ, ಗೀತಾ ಕನಕರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಕಾಲನಿ ನಿರ್ಮಾಣದ ಭರವಸೆ
ಬುಧವಾರ ಆಯ್ಕೆ ಪ್ರಕ್ರಿಯೆ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅಧ್ಯಕ್ಷ ಖಾಸನೀಸ ಅವರು, ನ್ಯಾಯವಾದಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯವಾದಿಗಳಿಗೆ ವಿವಿಧ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.

ಪ್ರತಿಯೊಂದು ಕ್ಷೇತ್ರದಲ್ಲ ಕಾರ್ಯನಿರ್ವಹಿಸುವವರಿಗೆ ಅವರದ್ದೇ ಆದ ಕಾಲನಿಗಳು ನಿರ್ಮಾಣಗೊಂಡಿವೆ, ಉದಾಹರಣೆಗೆ ಪತ್ರಕರ್ತರ ಕಾಲನಿ, ಕೆಎಸ್‌ಆರ್‌ಟಿಸಿ ಕಾಲನಿ ಹೀಗೆ ನ್ಯಾಯವಾದಿಗಳಿಗಾಗಿಯೇ ಪ್ರತ್ಯೇಕವಾದ ನ್ಯಾಯವಾದಿಗಳ ಬಡಾವಣೆ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಎಟಿಎಂ ಘಟಕ ನಿರ್ಮಾಣಕ್ಕೆ ಪ್ರಯತ್ನಿಸುವೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದರು.