ನೀರು ಹರಿಸುವಂತೆ ಒತ್ತಾಯ

ವಿಜಯಪುರ: ಚಿಮ್ಮಲಗಿ ಏತ ನೀರಾವರಿ ಕಾಲುವೆಗಳ ಮೂಲಕ ಗ್ರಾಮಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ದೇವರ ಹಿಪ್ಪರಗಿ ತಾಲೂಕಿನ ಇಂಗಳಗಿ, ಮುಳಸಾವಳಗಿ, ಹರನಾಳ ಹಾಗೂ ನಿವಾಳಖೇಡ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನ, ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಅಲ್ಲದೆ ಬರ ಕಾಮಗಾರಿಗಳು ಪ್ರಾರಂಭವಾಗದೆ ಇರುವುದರಿಂದ ಗ್ರಾಮಗಳಲ್ಲಿನ ಜನರು ಗುಳೆ ಹೋಗುತ್ತಿದ್ದಾರೆ. ಹಾಕಿದ ಬೆಳೆ ಕೈಗೆ ಸೇರದೇ ನೆಲಕಚ್ಚಿವೆ. ಬೆಳೆ ಪರಿಹಾರವೂ ಬಂದಿಲ್ಲ. ಶೀಘ್ರವೇ ಕೆರೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಸಂತೋಷ ಬಿರಾದಾರ, ಅಪ್ಪಾರಾಯಗೌಡ ಪಾಟೀಲ, ಶರಣಗೌಡ ಕೊಣ್ಣೂರ, ರಾಮನಗೌಡ ಬಿರಾದಾರ, ಮಂಜುನಾಥ ಕೊಕಟನೂರ, ಯಲ್ಲಾಲಿಂಗ ಹುಗ್ಗಿ, ರೇವಣಸಿದ್ದ ಪೂಜಾರಿ, ಶರಣಬಸು ತಳವಾರ, ರಾಮು ಪೂಜಾರಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *