ವ್ಯಕ್ತಿಯ ಗಮನ ಬೇರೆಡೆ ಸೆಳೆದು 15 ಲಕ್ಷ ದೋಚಿದ ಕಿರಾತಕರು

ವಿಜಯಪುರ: ವ್ಯಕ್ತಿಯ ಗಮನ ಬೇರೆಡೆ ಸೆಳೆದು 15 ಲಕ್ಷ ರೂ. ದೋಚಿದ ಪ್ರಕರಣ ಗುರುವಾರ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ಬೇಳೆ ಕಾಳು ವ್ಯಾಪಾರಿ ಕುಣಾಲ ಪೋರವಾಲ ಎಂಬುವರಿಂದ ಹಣ ದೋಚಲಾಗಿದೆ. ಬ್ಯಾಂಕ್‌ನಿಂದ ಹಣ ಪಡೆದು ಹೊರ ಬಂದ ಪೋರವಾಲ ಸ್ಕೂಟರ್ ಹತ್ತುವಾಗ ಅಪರಿಚಿತರಿಬ್ಬರು ಹಿಂದೆ ಹಣ ಬಿದ್ದಿದೆ ನೋಡಿ ಎಂದ್ದಾರೆ.

ಕೂಡಲೇ ಸ್ಕೂಟರ್ ಇಳಿದು ಹಿಂದೆ ಬಂದು ನೋಡುತ್ತಿದ್ದಾಗ ಪೋರವಾಲ್ ಅವರು ಸ್ಕೂಟರ್ ಮೇಲಿಟ್ಟಿದ್ದ ಹಣದ ಥೈಲಿ ಎಗರಿಸಿ ಪರಾರಿಯಾಗಿದ್ದಾರೆ. ಪೋರವಾಲ ಅವರದ್ದು ಕಡಲೆ ಮಿಲ್ ಇದ್ದು ನಿತ್ಯ ವ್ಯಾಪಾರ ವಹಿವಾಟಿಗಾಗಿ ಹಣ ತರುವ ಮತ್ತು ತೆಗೆದುಕೊಂಡು ಹೋಗುವುದು ಸಾಮಾನ್ಯ. ಇದನ್ನು ಅರಿತೇ ಅಪಚಿತರು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.