ಬಿಎಲ್‌ಡಿಇಯಲ್ಲಿ ಸಂಶೋಧನಾ ವಿಮರ್ಶೆ ಸಭೆ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಂಶೋಧನಾ ವಿಮರ್ಶೆ ಸಭೆ ನಡೆಯಿತು.

ಸಿಎಸ್‌ಆರ್‌ಐ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ.ವಿದ್ಯಾಧರ ಮುದಕವಿ ಹಾಗೂ ಬಿಎಲ್‌ಡಿಇ ಡಿಮ್ಡ್ ವಿವಿಯ ಪ್ರೊ.ಕುಸಾಲ ದಾಸ ಅವರ ನೇತೃತ್ವ ವಹಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಡಾ..ಗು. ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಶೋಧನಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಸಂಶೋಧನಾ ಲೇಖನಗಳು ಸ್ಕೋಪ್ಸ್ ಡಾಟಾ ಬೇಸ್‌ನಲ್ಲಿ ಸ್ಥಾನ ಪಡೆಯುತ್ತಿರುವುದು ಸಮಾಧಾನಕರ ವಿಷಯ ಎಂದು ಸಲಹೆಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮಹಾವಿದ್ಯಾಲಯದ ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ, ಉದ್ಯೋಗದಾತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಸುತ್ತಮುತ್ತಲಿನ ಉದ್ಯಮ ಹಾಗೂ ಕೃಷಿ ಆಧಾರಿತ ಸಂಶೋಧನಾ ಹಾಗೂ ಇನ್ನಿತರ ವಿಷಯಗಳ ಮೇಲೆ ಸಂಶೋಧನೆ ಕೈಗೊಳ್ಳಲು ಸಾಕಷ್ಟು ಕೇಂದ್ರ ಮತ್ತು ರಾಜ್ಯಗಳ ವಿವಿಧ ಸಂಸ್ಥೆಗಳಿಂದ ಧನಸಹಾಯ ದೊರೆಯಲಿದ್ದು, ಅದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

2018ನೇ ಸಾಲಿನಲ್ಲಿ ಮಹಾವಿದ್ಯಾಲಯಕ್ಕೆ ಕೆಸಿಟಿಯು ಸಂಸ್ಥೆಯಿಂದ 50 ಲಕ್ಷ ರೂ.ಮಂಜೂರಾಗಿದ್ದು, ನ್ಯಾನೋಮಟರಿಯಲ್ಸ್ ಟೆಸ್ಟಿಂಗ್ ಪ್ರಯೋಗಾಲಯವು ಸ್ಥಾಪಿಸಲಾಗವುದು. ವಿಜಿಎಸ್‌ಟಿ ಸಂಸ್ಥೆಯಿಂದ 5 ಲಕ್ಷ ರೂ.ದೊರಕಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಪ್ರಾಚಾರ್ಯ ಡಾ.ವಿ.ಪಿ.ಹುಗ್ಗಿ, ಉಪ ಪ್ರಾಂಶುಪಾಲ ಡಾ.ಪಿ.ವಿ. ಮಾಳಜಿ, ಸಂಶೋಧನಾ ಸಂಯೋಜಕ ಡಾ. ಆರ್.ಎಸ್. ಮಲ್ಲಾಡಿ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.