More

    ಕಲಾವಿದರು ಸಾಂಸ್ಕೃತಿಕ ವಾರಸುದಾರರು

    ವಿಜಯಪುರ: ಜಾನಪದ ಸಾಹಿತ್ಯ, ಕಲೆ, ಕಲಾವಿದರಿಂದ ಮನರಂಜನೆ ಜತೆಗೆ ಬದುಕಿಗೆ ಉತ್ತಮ ಮೌಲ್ಯಗಳನ್ನು ನೀಡುತ್ತದೆ. ಸಮಾಜದಲ್ಲಿ ಏಕತೆ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಕೊಡಬಾಗಿ ಹೇಳಿದರು.

    ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಲಕ್ಷ್ಮಿದೇವಿ ದೇವಾಲಯದಲ್ಲಿ ಜಿಪಂ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಜಾನಪದ ಪರಿಷತ್ (ಕಜಾಪ) ಜಿಲ್ಲಾ ಘಟಕದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ-2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸರ್ಕಾರ ಜಾನಪದ ಕಲಾವಿದರಿಗಾಗಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಅದರ ಸದುಪಯೋಗ ಪಡೆದು ಕಲೆ ಉಳಿಸುವ ಕೆಲಸ ಮಾಡಬೇಕೆಂದು ಹೇಳಿದರು.

    ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಉಪನ್ಯಾಸ ನೀಡಿ, ಜಾನಪದ ಸಂಸ್ಕೃತಿಯು ಈ ನೆಲದ ಮೂಲ ಸಂಸ್ಕೃತಿ. ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಜಾನಪದ ಕಲೆ, ಕಲಾವಿದರು ಸದೃಢವಾಗಿ ಬೆಳೆಯಲು ಸರ್ಕಾರ ಹಾಗೂ ಸಮುದಾಯ ಸಹಕಾರ ನೀಡಬೇಕು ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಜಾನಪದ ಕಲಾವಿದರು ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಅವರಿಗೆ ಇಲಾಖೆಯ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

    ಜಂಬಗಿ ಹಿರೇಮಠದ ಅಡವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಸದಸ್ಯ ವಾಸು ಗಿರೆವ್ವಗೋಳ, ಗ್ರಾಪಂ ಅಧ್ಯಕ್ಷೆ ದ್ರೌಪದಿ ಕಾಸೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೆಂಕಣ್ಣ ಬಿರಾದಾರ, ಸಿದ್ದಣ್ಣ ವಡಗೇರಿ ಮತ್ತಿತರರು ಉಪಸ್ಥಿತರಿದ್ದರು. ಪರಮಾನಂದ ಚಲವಾದಿ ಸ್ವಾಗತಿಸಿದರು. ಆನಂದ ಕುದರಿ ನಿರೂಪಿಸಿದರು. ರಮೇಶ ಮಟ್ಯಾಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts