ಹುಂಡೈ ಕಂಪನಿಯ ‘ವೆನ್ಯೂ’ ಕಾರ್ ಬಿಡುಗಡೆ

ವಿಜಯಪುರ: ನಗರದ ನಾರಾಯಣ ಹುಂಡೈ ಕಾರ್ ಶೋರೋಂನಲ್ಲಿ ಹುಂಡೈ ಕಂಪನಿಯ ನೂತನ ‘ವೆನ್ಯೂ’ ಕಾರ್‌ನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಎಸ್‌ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಪ್ರಶಾಂತ ಕುಮಾರ ಹಾಗೂ ಟೋಲ್ ನಾಕಾ ಜನರಲ್ ಮ್ಯಾನೇಜರ್ ವಿಷು ವೆಂಕಟೇಶ್ವರಲು ಆಗಮಿಸಿದ್ದರು. ಸಮಾರಂಭದಲ್ಲಿ ನಾರಾಯಣ ಹುಂಡೈನ ಮಾಲೀಕ ಮಧುಸೂಧನ ಜೋಶಿ, ಗೋಪಾಲ ಜೋಶಿ, ಗೋವಿಂದ ಜೋಶಿ, ವಾದಿರಾಜ ಜೋಶಿ, ಭದ್ರಿ ಜೋಶಿ, ವೆಂಕಟೇಶ ಜೋಶಿ, ದತ್ತಾ ಜೋಶಿ, ರಾಕೇಶ ಕುಲಕರ್ಣಿ, ವಿಜಯ ಜೋಶಿ, ಸಂಜೀವ ದಿವಾನಜಿ, ಪಾಲಿಕೆ ಸದಸ್ಯ ಮೈನು ಬೀಳಗಿ, ಉತ್ಸಾಹ ಗ್ರಾಹಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *