ದೈಹಿಕ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿ

ವಾಲಿಬಾಲ್ ಪಂದ್ಯಾವಳಿಗೆ ಚಾಲನೆ >>

ಮುದ್ದೇಬಿಹಾಳ: ತಾಲೂಕು ಮಟ್ಟದಲ್ಲಿ ಐತಿಹಾಸಿಕ ಕ್ರೀಡಾಕೂಟ ಸಂಘಟಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ದೈಹಿಕ ಶಿಕ್ಷಣವನ್ನು ಸಂಪೂರ್ಣ ನಿರ್ಲಕ್ಷಿೃಸಲಾಗಿದ್ದು, ಸರ್ಕಾರ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಅಭ್ಯುದಯ ವಿಜ್ಞಾನ ಪಪೂ ಕಾಲೇಜು ಸಹಯೋಗದಲ್ಲಿ ಪಟ್ಟಣದ ಅಭ್ಯುದಯ ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ಹೊಸದಾಗಿ ಕ್ರೀಡಾಂಗಣ ಆಗಬೇಕು. ಈಗಾಗಲೇ ಮುದ್ದೇಬಿಹಾಳ ತಾಲೂಕಿನಲ್ಲಿ ಕ್ರೀಡಾಂಗಣಕ್ಕೆ ಜಾಗ ಲಭ್ಯವಿದ್ದು, ಅದಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಳ್ಳುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಜನಕ್ಕೆ ಕ್ರೀಡೆ ಬಗ್ಗೆ ಅಭಿಮಾನವಿದೆ. ದೈಹಿಕ ಶಿಕ್ಷಕರ ನೇಮಕಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಕ್ರೀಡಾಸಕ್ತ ವಿದ್ಯಾರ್ಥಿಗಳ ಆಸಕ್ತಿಗೆ ಪ್ರೋತ್ಸಾಹ ಕೊಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು.

ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿ, ಕ್ರೀಡಾ ನಿಯಮದ ಪ್ರಕಾರ ಆಟದಲ್ಲಿ ಭಾಗಿಯಾಗಿ. ಯಾರೇ ಗೆಲುವು ಸಾಧಿಸಲಿ, ಕ್ರೀಡಾ ಸ್ಫೂರ್ತಿಯಿಂದ ಭಾಗಿಯಾಗಿ ಎಂದು ಹೇಳಿದರು.

ಅಂಕಲಿಮಠದ ಕೀರೇಶ್ವರ ಶ್ರೀ ಪ್ರತಿಜ್ಞಾ ವಿಧಿ ಬೋಧಿಸಿದರು. ವೀರೇಶ ಗೂಡಲಮನಿ ಸಂಪಾದಕತ್ವದಲ್ಲಿ ರಚಿಸಿದ ವಾಲಿಬಾಲ್ ಕ್ರೀಡೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮುಖಂಡರಾದ ಎಸ್.ಜಿ. ಪಾಟೀಲ ಶೃಂಗಾರಗೌಡ್ರ, ಅಧ್ಯಕ್ಷ ಎನ್.ಎಸ್. ಪೂಜಾರಿ, ಕಾರ್ಯದರ್ಶಿ ಎಂ.ಎನ್. ಮದರಿ, ಪುರಸಭೆ ಸದಸ್ಯ ಸಂಗಮ್ಮ ದೇವರಳ್ಳಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ. ಅಂಕದ, ತಹಸೀಲ್ದಾರ್ ಎಂ.ಎಸ್. ಬಾಗವಾನ, ವಾಸುದೇವ ಶಾಸ್ತ್ರಿ, ಸತೀಶ ಓಸ್ವಾಲ, ಎಸ್.ಎಸ್. ಹೊಸಮನಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಬಿರಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಚಿಕ್ಕೋಡಿ ಉಪನಿರ್ದೇಶಕ ಜಿ.ಎಸ್.ಪೂಜಾರಿ, ರವಿ ನಾಯಕ, ಬಸವರಾಜ ಸುಕಾಲಿ, ಬಿ.ಎಸ್. ಹೊಸೂರ, ರವಿ ಜಗಲಿ, ಎಂ.ಬಿ. ನಾವದಗಿ, ಎಸ್.ಎಸ್. ಅಂಗಡಿ, ಎಂ.ಎಚ್. ಹಾಲಣ್ಣವರ, ಮಲಕೇಂದ್ರಗೌಡ ಪಾಟೀಲ, ಶಿವಪ್ಪಗೌಡ ತಾತರೆಡ್ಡಿ, ಸಿದ್ದಣ್ಣ ಮೇಟಿ, ಶ್ರೀದೇವಿ ಮದರಿ, ಪ್ರಾಚಾರ್ಯ ಗೋಪಾಲಕೃಷ್ಣ, ಎಸ್.ಎ. ಬಿರಾಜದಾರ, ಅಪ್ಪು ಮೈಲೇಶ್ವರ, ಬಿ.ಎಸ್. ಮೇಟಿ ಇತರರು ಇದ್ದರು.

ತಾಳಿಕೋಟೆ ಎಸ್.ಕೆ. ಕಾಲೇಜಿನ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು. ಸಿದ್ದನಗೌಡ ಬಿಜ್ಜೂರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಎಸ್.ಬಿ. ಚಲವಾದಿ ಸ್ಬಾಗತಿಸಿದರು. ಬಿ.ಟಿ. ಗೊಂಗಡಗಿ(ಪ್ರಕಾಶ) ಹಾಗೂ ಟಿ.ಡಿ. ಲಮಾಣಿ ನಿರೂಪಿಸಿದರು. ಎಸ್.ಎಚ್. ಹಾಲ್ಯಾಳ ವಂದಿಸಿದರು.

ಮುದ್ದೇಬಿಹಾಳದಲ್ಲಿ ಗೆದ್ದವರು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗುತ್ತಾರೆ. ಮುದ್ದೇಬಿಹಾಳ ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಿಸಿಕೊಡಲು ಜಿಲ್ಲಾಡಳಿತ ತ್ವರಿತವಾಗಿ ಕಾರ್ಯನಿರ್ವಹಿಸಲಿದೆ. ನಮ್ಮಿಂದಾದ ಸಹಕಾರವನ್ನು ಜಿಲ್ಲಾಡಳಿತದಿಂದ ಮಾಡಲಾಗುವುದು.
– ಎಸ್.ಬಿ. ಶೆಟ್ಟೆಣ್ಣವರ ಜಿಲ್ಲಾಧಿಕಾರಿ ವಿಜಯಪುರ