ದಾಸರನ್ನು ಒಂದೇ ಜಾತಿಗೆ ಸಿಮೀತಗೊಳಿಸಬೇಡಿ

ಮುದ್ದೇಬಿಹಾಳ: ಸಂತರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು. ಅವರು ಸಮಾಜದ ಎಲ್ಲ ವರ್ಗದವರಿಗೂ ಸಲ್ಲುವವರಾಗಿದ್ದಾರೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಮದ ವಿದ್ಯಾವರೇಣ್ಯ ದೇವಸ್ಥಾನ ಆವರಣದಲ್ಲಿ ಗುರುವಾರ ಕನಕದಾಸ ಯುವಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಹಾಗೂ ಶಾಸಕರ ಅಭಿನಂದನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುದ್ದೇಬಿಹಾಳ ಪಟ್ಟಣದಲ್ಲಿ ಕನಕದಾಸ ಭವನ ನಿರ್ಮಾಣಕ್ಕೆ ಸಮಾಜ ಬಾಂಧವರು ಬೇಡಿಕೆ ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ, ಉಪನ್ಯಾಸಕ ಎಸ್.ಕೆ.ಹರನಾಳ ಮಾತನಾಡಿದರು.

ಯಮನಪ್ಪ ಹುಲಗಣ್ಣಿ ಅಧ್ಯಕ್ಷತೆ ವಹಿಸಿದ್ದರು. ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಮಲಕೇಂದ್ರಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ ಆರೆಶಂಕರ, ಸದಸ್ಯೆ ಮಹಾದೇವಿ ಯರಝರಿ, ಮುಖಂಡ ಗಿರೀಶಗೌಡ ಪಾಟೀಲ,ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ತಾಪಂ ಮಾಜಿ ಅಧ್ಯಕ್ಷ ಬಿ.ಎಚ್.ಹಾಲಣ್ಣವರ ದೊರೆ, ಬಸವರಾಜ ನಂದಿಕೇಶ್ವರಮಠ, ಗಣ್ಯರಾದ ರವಿಚಂದ್ರ ಹಾಲ್ಯಾಳ, ಡಾ.ಸಿ.ಎಚ್.ನಾಗರಬೆಟ್ಟ, ಎಸ್.ಎಚ್.ಲೊಟಗೇರಿ ಸೇರಿದಂತೆ ಹಲವರು ಇದ್ದರು.

ತಾಳಿಕೋಟೆಯ ಬಸವರಾಜ ಬಿರಾದಾರ ಭರತನಾಟ್ಯ ಪ್ರದರ್ಶಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಂಘಟಕ ಬಸವರಾಜ ಹುಲಗಣ್ಣಿ ಸ್ವಾಗತಿಸಿದರು. ಬಿ.ಆರ್.ಚಪ್ಪರಬಂದ್ ನಿರೂಪಿಸಿದರು. ಗೋಪಾಲ ಹೂಗಾರ ವಂದಿಸಿದರು.