ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿ

>

ಮುದ್ದೇಬಿಹಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆದು ಹೊರ ಗುತ್ತಿಗೆ ನೌಕರರಿಗೆ ಸೇವಾಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಶನಿವಾರ ಪಟ್ಟಣದಲ್ಲಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಪ್ರತಿಭಟನಾ ರ‌್ಯಾಲಿ ನಡೆಸಿದರು.

ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಹಾಯ್ದು ಬಸವೇಶ್ವರ ವೃತ್ತ, ಮಿನಿವಿಧಾನಸೌಧಕ್ಕೆ ಆಗಮಿಸಿದ ನೌಕರರು, ತಹಸೀಲ್ದಾರ್ ಎಂ.ಎಸ್.ಬಾಗವಾನ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಹಾಸ್ಟೆಲ್ ಹೊರ ಸಂಪನ್ಮೂಲ ನೌಕರರಿಗೆ ಮರಣ ಶಾಸನದಂತಿರುವ ಅ.23ರಂದು ಹೊರಡಿಸಿರುವ ಆದೇಶದಂತೆ ಹೊರಗುತ್ತಿಗೆಯಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಆಗಸ್ಟ್ 5, 2018ರಿಂದ ಆರು ತಿಂಗಳವರೆಗೆ ಮಾತ್ರ ಕೆಲಸದಲ್ಲಿ ಮುಂದುವರಿಸಿ ಬಳಿಕ ಅವರ ಸೇವೆ ಹಿಂಪಡೆಯಬೇಕು ಎಂದು ತಿಳಿಸಿರುವುದರಿಂದ ನಮಗೆ ದಿಕ್ಕೆ ತೋಚದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಚಲವಾದಿ, ಲಕ್ಷ್ಮಣ ಮಸಳಿ, ಗದ್ದೆಪ್ಪ ಜೈನಾಪುರ, ಮಹೇಶ ಓಲೇಕಾರ, ಲಾಳೇಮಶ್ಯಾಕ ಸುಗಂಧಿ, ಸಂಗಮೇಶ ಚಲವಾದಿ, ಬಸವರಾಜ ಕೋಳೂರ, ಮಾದೇವಿ ಚಲವಾದಿ, ಮಹಾದೇವಿ ನಾಯ್ಕಮಕ್ಕಳ, ಮಲ್ಲಮ್ಮ ಢವಳಗಿ, ರಾಜು ಚಲವಾದಿ, ಪಾರ್ವತಿ ಕೋಳೂರ, ಶಾಂತಮ್ಮ ಢವಳಗಿ, ಹಣಮಂತ ಮೇಲಿನಮನಿ, ಭೀಮಣ್ಣ ಚಲವಾದಿ, ಜಯಶ್ರೀ ಕದ್ದೆನಹಳ್ಳಿ, ಬಸವರಾಜ ಗುರಿಕಾರ, ಭೀಮು ಸನದಿ, ರಾಮಚಂದ್ರ ಕೋಳಿ, ಯಲ್ಲಪ್ಪ ದೊಡಮನಿ, ಕಾಶೀಮಸಾ ಆಲದಾಳ, ಮಾಳಪ್ಪ ಇಂಗಳಗಿ ಇತರರು ಇದ್ದರು.