ಸ್ವಚ್ಛ ಭಾರತಕ್ಕಾಗಿ ಬೈಕ್ ಯಾತ್ರೆ

ಸಂಸ್ಕೃತಿ, ಸಂಪ್ರದಾಯ ಕುರಿತು ಪ್ರಚಾರ >>

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸು ಸಾಕಾರಗೊಳಿಸುವ ಉದ್ದೇಶದಿಂದ ಬೈಕ್ ಯಾತ್ರೆ ಕೈಗೊಂಡಿರುವ ಯುವ ಸಾಹಿತಿ, ರಾಷ್ಟ್ರಪ್ರೇಮಿಯೊಬ್ಬರು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ.

ಅವರು ದೇವರಹಿಪ್ಪರಗಿ ಪಟ್ಟಣದ ಭೀಮರಾಯ ಹೂಗಾರ. ಈಗಾಗಲೇ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರವನ್ನು ಅಲಂಕೃತ ಬೈಕ್ ಮೂಲಕ ಕೈಗೊಂಡಿದ್ದು, ಡಿ.24ರಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಸದ್ಯ ಕಗ್ಗೋಡದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸಂಸ್ಕೃತಿ, ಸಂಪ್ರದಾಯದ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಭಿತ್ತಿ ಪತ್ರ, ಸ್ಟಿಕ್ಕರ್, ಪುಸ್ತಕಗಳ ಮುಖಪುಟ ಅಂಟಿಸಿದ ಒಂದು ತ್ರಿಭುಜಾಕಾರ ಡಬ್ಬವನ್ನು ಬೈಕ್ ಮೇಲಿರಿಸಿ ಅದರ ಮೇಲೆ ಕನ್ನಡ ಬಾವುಟ ನೆಟ್ಟಿದ್ದು, ಕನ್ನಾಡಾಭಿಮಾನ ಕೆರಳಿಸುವಂತಿದೆ. ಬೈಕ್ ವೀಕ್ಷಣೆಗೆ ಆಗಮಿಸಿದವರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ.

ದೆಹಲಿಗೆ ಯಾತ್ರೆ

ಸ್ವಚ್ಛ ಭಾರತ ಯಶಸ್ವಿಗೊಳಿಸಲು ಗಾಂಧಿ, ಮೋದಿ ಕನಸು ನನಸು ಮಾಡುವುದಕ್ಕಾಗಿ ಹಗಲಿರುವ ಶ್ರಮಿಸುತ್ತಿರುವ ಹೂಗಾರ, ‘ಸ್ವಚ್ಛ ಭಾರತಕ್ಕಾಗಿ ಸಾವಿರ ನುಡಿಮುತ್ತುಗಳು’ ಕೃತಿ ರಚಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದರು. ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ಅವರಿಂದ ಅಭಿನಂದನಾ ಪತ್ರ ಪಡೆದಿರುವುದು ವಿಶೇಷ. ಇದು ಹೂಗಾರವರಿಗೆ ಮತ್ತಷ್ಟು ಹುರುಪು, ಹುಮ್ಮಸ್ಸು ತುಂಬಿದ್ದು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಜನವರಿ 14 ರಿಂದ 26 ವರೆಗೆ ವಿಜಯಪುರದಿಂದ ದೆಹಲಿವರೆಗೆ ಸ್ವಚ್ಛ ಭಾರತ ಪ್ರಚಾರಕ್ಕಾಗಿ ಬೈಕ್ ಯಾತ್ರೆಗೆ ನಡೆಸಲು ನಿರ್ಧರಿಸಿದ್ದಾರೆ. ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದು, ಬೈಕ್‌ಗೆ ಸ್ವಚ್ಛ ಭಾರತ ಸಂದೇಶ ಸಾರುವ ಹಲವಾರು ನುಡಿ ಮುತ್ತುಗಳನ್ನು ಬರೆಸಿದ್ದಾರೆ. ಆ ಮೂಲಕ ಸ್ವಚ್ಛ ಭಾರತ ಅಭಿಯಾನ ಯಶಸ್ವಿಗೊಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

ರಕ್ಷಣಾ ಪತ್ರದ ನಿರೀಕ್ಷೆ

ಸ್ವಚ್ಛ ಭಾರತ ಯಾತ್ರೆ ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದಿರುವ ಹೂಗಾರ, ಅವರಿಗೆ ರಕ್ಷಣೆ ಒದಗಿಸುವಂತೆ ಪ್ರಧಾನಿ ಕಚೇರಿ ರಕ್ಷಣಾ ಇಲಾಖೆ ಪತ್ರ ಬರೆದಿದೆ. ಆ ಪತ್ರದ ಪ್ರತಿ ಹೂಗಾರ ಬಳಿ ಇದ್ದು, ರಕ್ಷಣಾ ಇಲಾಖೆ ಪತ್ರ ನಿರೀಕ್ಷೆಯಲ್ಲಿದ್ದಾರೆ. ರಕ್ಷಣಾ ಇಲಾಖೆ ಪತ್ರ ಬರದೆ ಇದ್ದರೂ ದೆಹಲಿವರೆಗೆ ಯಾತ್ರೆ ಕೈಗೊಳ್ಳುವೆ ಎಂದು ಭೀಮರಾಯ ಹೂಗಾರ ‘ವಿಜಯವಾಣಿ’ಗೆ ತಿಳಿಸಿದರು.

ಚ್ಛ ಭಾರತ ಯಾತ್ರೆ ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದಿರುವ ಹೂಗಾರ, ಅವರಿಗೆ ರಕ್ಷಣೆ ಒದಗಿಸುವಂತೆ ಪ್ರಧಾನಿ ಕಚೇರಿ ರಕ್ಷಣಾ ಇಲಾಖೆ ಪತ್ರ ಬರೆದಿದೆ. ಆ ಪತ್ರದ ಪ್ರತಿ ಹೂಗಾರ ಬಳಿ ಇದ್ದು, ರಕ್ಷಣಾ ಇಲಾಖೆ ಪತ್ರ ನಿರೀಕ್ಷೆಯಲ್ಲಿದ್ದಾರೆ. ರಕ್ಷಣಾ ಇಲಾಖೆ ಪತ್ರ ಬರದೆ ಇದ್ದರೂ ದೆಹಲಿವರೆಗೆ ಯಾತ್ರೆ ಕೈಗೊಳ್ಳುವೆ ಎಂದು ಭೀಮರಾಯ ಹೂಗಾರ ‘ವಿಜಯವಾಣಿ’ಗೆ ತಿಳಿಸಿದರು.

ಸ್ವಚ್ಛ ಭಾರತ ಯಾತ್ರೆ ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದಿರುವ ಹೂಗಾರ, ಅವರಿಗೆ ರಕ್ಷಣೆ ಒದಗಿಸುವಂತೆ ಪ್ರಧಾನಿ ಕಚೇರಿ ರಕ್ಷಣಾ ಇಲಾಖೆ ಪತ್ರ ಬರೆದಿದೆ. ಆ ಪತ್ರದ ಪ್ರತಿ ಹೂಗಾರ ಬಳಿ ಇದ್ದು, ರಕ್ಷಣಾ ಇಲಾಖೆ ಪತ್ರ ನಿರೀಕ್ಷೆಯಲ್ಲಿದ್ದಾರೆ. ರಕ್ಷಣಾ ಇಲಾಖೆ ಪತ್ರ ಬರದೆ ಇದ್ದರೂ ದೆಹಲಿವರೆಗೆ ಯಾತ್ರೆ ಕೈಗೊಳ್ಳುವೆ ಎಂದು ಭೀಮರಾಯ ಹೂಗಾರ ‘ವಿಜಯವಾಣಿ’ಗೆ ತಿಳಿಸಿದರು.

ಸಾಹಿತ್ಯಾಭಿಮಾನಿ

ಸಾಹಿತ್ಯಾಭಿಮಾನಿ ಆಗಿರುವ ಹೂಗಾರ 32ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರಪ್ರೇಮ, ಸಾಹಿತ್ಯ ಮೈಗೂಡಿಸಿಕೊಂಡಿರುವ ಅವರು, ನಾಡಿಗಾಗಿ ಏನಾದರೂ ಮಾಡುತ್ತಲೇ ಇರುತ್ತಾರೆ. ಸಾಹಿತ್ಯ, ಕೃಷಿಮೇಳ, ಧಾರ್ಮಿಕ ಕಾರ್ಯಕ್ರಮ ಮತ್ತಿತರ ಸಮ್ಮೇಳನಗಳು ನಡೆದರೆ ಅಲ್ಲಿಗೆ ಬೈಕ್ ಮೂಲಕವೇ ಪ್ರಚಾರ ಕೈಗೊಳ್ಳುತ್ತ ಅಲ್ಲಿಗೆ ಹೋಗುವುದು ಅವರ ಹವ್ಯಾಸ. ಕಳೆದ ವರ್ಷ ಮೈಸೂರು ಸಾಹಿತ್ಯ ಸಮ್ಮೇಳನಕ್ಕೆ ಬೈಕ್ ಮೇಲೆ ತೆರಳಿ ಸಾಹಿತ್ಯಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.