ದೇಶಪ್ರೇಮ ಪ್ರತಿಯೊಬ್ಬರ ಉಸಿರಾಗಲಿ

ವಿಜಯಪುರ: ದೇಶಕ್ಕಾಗಿ ಹೋರಾಡಿದ ಮಹಾರಾಣಾ ಪ್ರತಾಪ ಸಿಂಹ ಅವರ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಧಾನ ಕಾರ್ಯದರ್ಶಿಗಳಾದ ಮುಧೋಳದ ಶಿವಾನಂದ ಬಡಿಗೇರ ಹೇಳಿದರು.

ಇಲ್ಲಿನ ಮಹಾರಾಣಾ ಪ್ರತಾಪ ಸಿಂಹ ವೃತ್ತದಲ್ಲಿ ರಾಜಪೂತ ಸೋಶಿಯಲ್ ಎಕನಾಮಿಕಲ್ ಕಲ್ಚರಲ್ ಎಕ್ಟಿವೇಟಿಸ್ ಅಸೋಸಿಯೇಶನ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಹಾರಾಣಾ ಪ್ರತಾಪಸಿಂಹ ಅವರ 479ನೇ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.

ದೇಶ-ಧರ್ಮ ರಕ್ಷಣೆಯಲ್ಲಿ ಮಹಾರಾಣಾ ಪ್ರತಾಪ ಸಿಂಹ ಅವರ ಕೊಡುಗೆ ಅಪಾರ. ಈ ರಾಷ್ಟ್ರದ ಮೂಲ ಸಂಸ್ಕೃತಿ, ಪರಂಪರೆ ಮತ್ತು ಸನಾತನ ಸಂಪ್ರದಾಯದ ಉಳಿವಿಗೆ ಶ್ರಮಿಸಿದವರು ಪ್ರತಾಪ ಸಿಂಹ. ಅವರ ಶೌರ್ಯ, ಪರಾಕ್ರಮ ಎಷ್ಟು ಕೊಂಡಾಡಿದರೂ ಸಾಲದು. ಅವರ ರಾಷ್ಟ್ರ ಸೇವೆ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕೆಂದರು.

15 ಕೆಜಿ ಭಾರದ ಖಡ್ಗ ಒಂದು ಹಿಡಿದು ಹೋರಾಡುತ್ತಿದ್ದ ಪ್ರತಾಪ ಸಿಂಹ ಅವರು ಅದೇ ತೂಕದ ಇನ್ನೊಂದು ಖಡ್ಗವನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು. 7 ಕೆಜಿ ಭಾರದ ಬರ್ಜಿ ಬೆನ್ನಲ್ಲಿ ಇದ್ದರೆ 35 ಕೆಜಿ ಬಾರದ ಉಕ್ಕಿನ ಕವಚಗಳು ಮೈಮೇಲೆ ಧಾರಣ ಮಾಡುತ್ತಿದ್ದರು. ಈ ರೀತಿ ಯುದ್ದ ಸನ್ನದ್ದರಾಗಿ ಚೇತಕ ಎಂಬ ಕುದುರೆಯನ್ನೇರಿ ಯುದ್ದಕ್ಕೆ ಹೋರಟರೆ ಮೋಘಲರ ಎದೆ ನಡಗುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರಿಗೂ ಇವರು ಪ್ರೇರಣೆಯಾಗಿದ್ದರೆಂದು ತಿಳಿಸಿದರು.

ರಜಪೂತ ಸಮಾಜದ ಅಧ್ಯಕ್ಷ ಭೀಮಸಿಂಗ (ಪಾಪು) ರಜಪೂತ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಾಪ ಸಿಂಹ ಅವರ ಇತಿಹಾಸ ರೋಚಕವಾದದ್ದು. ಅವರ ಜೀವನಾದರ್ಶ ಎಲ್ಲರೂ ಅರಿತು ಅಳವಡಿಸಿಕೊಳ್ಳಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಮುಖಂಡರಾದ ಅಜಿತಸಿಂಗ ಹಜೇರಿ, ಪರಶುರಾಮ ರಜಪೂತ, ವಿನಯಸಿಂಗ ರಜಪೂತ, ಸಿದ್ದುಸಿಂಗ ರಜಪೂತ, ಸಂತೋಷ ಹಲವಾಯಿ, ರಾಜು ರಜಪೂತ, ನೆಹರು ರಜಪೂತ, ಸುರೇಶ ಕಂಪಲ್ಲಿ, ನಾರಾಯಣಸಿಂಗ ರಜಪೂತ, ಅಶೋಕಸಿಂಗ ರಜಪೂತ, ಸಂಜಯಸಿಂಗ ರಜಪೂತ, ಪರಶುರಾಮಸಿಂಗ ರಜಪೂತ, ಡಾ ಅರುಣಸಿಂಗ ಪರದೇಶಿ, ಸಕಾರಾಮಸಿಂಗ ರಜಪೂತ, ಮೋಹನಸಿಂಗ ರಜಪೂತ, ರತನಸಿಂಗ ಹಜೇರಿ, ಅರುಣಸಿಂಗ ಠಾಕೂರ, ಅಣ್ಣುಸಿಂಗ ಹುನ್ನುರ, ಗುಲಾಬಸಿಂಗ ಹಜೇರಿ, ಗುಂಡುಸಿಂಗ ಹಜೇರಿ, ಜಯಸಿಂಗ ಹಜೇರಿ, ನಾರಾಯಣಸಿಂಗ ಹಜೇರಿ, ಅಶೋಕಸಿಂಗ ಹಜೇರಿ, ಭೀಮಸಿಂಗ ಹಜೇರಿ ಸೇರಿದಂತೆ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.

ಆರಂಭದಲ್ಲಿ ಮಹಾರಾಣಾ ಪ್ರತಾಪರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧರ್ಮಧ್ವಜಾರೋಹಣ ನೆರವೇರಿಸಲಾಯಿತು.

 

Leave a Reply

Your email address will not be published. Required fields are marked *