ಚಿತ್ರಮಂದಿರಕ್ಕೆ ಬಾರದ ಸಿನಿಪ್ರಿಯರು

blank

ಹೀರಾನಾಯ್ಕ ಟಿ. ವಿಜಯಪುರ

ಕರೊನಾದಿಂದಾಗಿ ಕಳೆದ ಏಪ್ರಿಲ್ ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಇದೀಗ ಆರಂಭಗೊಂಡಿವೆ. ಆದರೆ, ಸಿನಿಪ್ರಿಯರು ಇಲ್ಲದೆ, ಚಿತ್ರಮಂದಿರಗಳು ಖಾಲಿ ಖಾಲಿ ಆಗಿವೆ. ಶೇ. 100ರಷ್ಟು ಚಿತ್ರಮಂದಿರಗಳ ಭರ್ತಿಗೆ ಸರ್ಕಾರ ಆದೇಶಿಸಿದೆ. ಆದರೆ, ಸಿನಿ ರಸಿಕರಿಲ್ಲದೆ ಟಾಕೀಸ್‌ಗಳು ಬಿಕೋ ಎನ್ನುವಂತಾಗಿದೆ.
ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಅದಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಶೇ.100 ರಷ್ಟು ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಥಿಯೇಟರ್‌ಗಳಲ್ಲಿ ಪ್ರೇಕ್ಷಕರೇ ಇರಲಿಲ್ಲ. ಶೇ. 10 ರಷ್ಟು ಕೂಡ ಆಸನಗಳು ಭರ್ತಿ ಆಗಿರಲಿಲ್ಲ. ಇದರಿಂದ ಚಿತ್ರಮಂದಿರದ ಮಾಲೀಕರಿಗೆ ಮತ್ತಷ್ಟು ಆತಂಕ ಕಾಡಿದಂತಾಗಿದೆ.

ಥಿಯೇಟರ್‌ಗಳು ಖಾಲಿ ಖಾಲಿ

ಜಿಲ್ಲೆಯಲ್ಲಿ ಒಟ್ಟು 14 ಚಿತ್ರಮಂದಿರಗಳಿದ್ದು, ಶುಕ್ರವಾರ ನಾಲ್ಕು ಚಿತ್ರಮಂದಿರಗಳು ಮಾತ್ರ ಆರಂಭಗೊಂಡಿದ್ದವು. ವಿಜಯಪುರ ನಗರದಲ್ಲಿ ಎರಡು ಹಾಗೂ ಸಿಂದಗಿ ಮತ್ತು ತಾಳಿಕೋಟೆಯಲ್ಲಿ ಥಿಯೇಟರ್‌ಗಳಲ್ಲಿ ಸಿನೆಮಾ ಪ್ರದರ್ಶನಗೊಂಡಿದ್ದು, ಶೇ.10 ರಷ್ಟು ಕೂಡ ಆಸನಗಳು ಭರ್ತಿಗೊಂಡಿರಲಿಲ್ಲ. ಪ್ರೇಕ್ಷಕರಿಲ್ಲದೆ ಚಿತ್ರಮಂದಿರಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು.
ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ 682 ಆಸನದ ವ್ಯವಸ್ಥೆವಿದ್ದು, ಮೊದಲ ಪ್ರದರ್ಶನಕ್ಕೆ 128 ಪ್ರೇಕ್ಷಕರು ಆಗಮಿಸಿದ್ದರು. ಇನ್ನೂ ಸಿಂದಗಿಯ ಪ್ರಶಾಂತ್ ಚಿತ್ರಮಂದಿರದಲ್ಲಿ 500 ಆಸನಗಳಿದ್ದು, 44 ಆಸನಗಳು ಭರ್ತಿಗೊಂಡಿದ್ದವು.
ಇನ್ನೂ ವಿಜಯಪುರದ ಅಪ್ಸರಾ ಹಾಗೂ ತಾಳಿಕೋಟೆಯ ಮಹಾವೀರ, ಚಿತ್ರಮಂದಿರದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಪ್ರೇಕ್ಷಕರಿದ್ದರು. ಸಿನಿಪ್ರಿಯರಿಗಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಪ್ರೇಕ್ಷಕರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಂದು ಟಿಕೆಟ್ ಪಡೆದು ನಂತರ ಚಿತ್ರಮಂದಿರದಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು.

ಚಿತ್ರಪ್ರದರ್ಶನಕ್ಕೆ ಮಾಲೀಕರ ನಿರಾಸಕ್ತಿ

ಥಿಯೇಟರ್ ಮಾಲೀಕರು ಹಾಗೂ ಚಲನಚಿತ್ರ ನಿರ್ಮಾಪಕರ ನಡುವಿನ ತಿಕ್ಕಾಟದಲ್ಲಿ ಚಿತ್ರಮಂದಿರಗಳು ಆರಂಭಗೊಳ್ಳದೆ ಹಾಗೇ ಮುಚ್ಚಿವೆ. ಚಿತ್ರ ಮಂದಿರಗಳಿಗೆ ನೀಡಬೇಕಾದ ಕಮೀಷನ್ ಹಾಗೂ ಪರ್ಸೆಂಟೇಜ್ ವಿಚಾರವಾಗಿ ಇನ್ನೂ ಯಾವುದೇ ರೀತಿಯ ನಿರ್ಧಾರ ಅಂತಿಮಗೊಂಡಿಲ್ಲ, ಇದರಿಂದಾಗಿ ಚಿತ್ರಮಂದಿರಗಳನ್ನು ತೆರೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ಆಂಧ್ರ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸಿನೆಮಾ ನೋಡುವ ಪ್ರೇಕ್ಷಕರ ಆಧಾರದ ಮೇಲೆ ಶೇಕಡವಾರು ಹಣವನ್ನು ಚಿತ್ರಮಂದಿರದ ಮಾಲೀಕರಿಗೆ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಜಾರಿಯಾಗಬೇಕು ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಜಿಲ್ಲಾಧ್ಯಕ್ಷ ಬಾಳು ಜೋಷಿ.

ಕರೊನಾದಿಂದಾಗಿ ಸಿನೆಮಾ ನೋಡುಗರ ಸಂಖ್ಯೆ ಸಾಕಷ್ಟು ಇಳಿಕೆಯಾಗಿದೆ. ಇದರಿಂದಾಗಿ ಚಿತ್ರಮಂದಿರ ಮುಚ್ಚುವ ಪರಿಸ್ಥಿತಿ ಬಂದೊದಗಿದೆ.
ಬಸನಗೌಡ ಬಿರಾದಾರ ವ್ಯವಸ್ಥಾಪಕ ಲಕ್ಷ್ಮಿ ಚಿತ್ರಮಂದಿರ

ಕನ್ನಡ ಚಿತ್ರರಂಗ ಬೆಳೆಯಬೇಕು ಎಂದರೆ ಥಿಯೇಟರ್‌ಗೆ ಬಂದು ಸಿನೆಮಾ ನೋಡಬೇಕಾಗುತ್ತದೆ. ಒಂದು ವರ್ಷದ ನಂತರ ಚಿತ್ರಮಂದಿರಕ್ಕೆ ಆಗಮಿಸಿದ್ದು ಖುಷಿಯಾಗಿದೆ.
ರಾಹುಲ್ ಸಿಂಧೆ, ಪ್ರೇಕ್ಷಕ

Share This Article

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…