ವಿವಿಧ ಬೇಡಿಕೆ ಈಡೇರಿಕೆಗೆ ಸಾರಿಗೆ ಸಂಸ್ಥೆ ನೌಕರರ ಧರಣಿ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ವಿಜಯಪುರ ವಿಭಾಗದ ಪದಾಧಿಕಾರಿಗಳು ಶನಿವಾರ ಧರಣಿ ಸತ್ಯಾಗ್ರಹ ನಡೆಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಪ್ರಧಾನ ಕಾರ್ಯದರ್ಶಿ ಐ.ಐ.ಮುಶ್ರಿಫ್ ಮಾತನಾಡಿ, ನಮ್ಮ ಫೆಡರೇಷನ್ ವತಿಯಿಂದ ರ್ಚಚಿಸಿದ ಹಲವು ತೀರ್ವನಗಳನ್ನು ಜಾರಿ ಮಾಡುವುದರಲ್ಲಿ ವಿಳಂಬವಾಗುತ್ತಿದೆ. ನಮ್ಮ ಬೇಡಿಕೆಗಳಾದ ಬಿಎಂಟಿಸಿ ಮತ್ತು ವಾಯವ್ಯ ನಿಗಮದಲ್ಲಿ ಕಾರ್ವಿುಕರಿಗೆ ಬರಬೇಕಾದ ಬಾಕಿ ಹಣವನ್ನು ಕೂಡಲೇ ನೀಡಬೇಕು. ಕೂಡಲೇ ವೈದ್ಯಕೀಯ ವೆಚ್ಚಗಳ ಮರುಪಾವತಿ ಮಾಡಬೇಕು. ಸಿಬ್ಬಂದಿ ಅನುಪಾತ ಜಾಸ್ತಿ ಮಾಡಬೇಕು. ನಿರ್ವಾಹಕರ ವಿರುದ್ಧ ಎನ್​ಐ ಎನ್​ಸಿ ಕೇಸ್​ಗಳನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ತೆರಿಗೆ ರಿಯಾಯಿತಿ ಹಾಗೂ ಇತರೆ ಅನುದಾನಗಳನ್ನು ನೀಡಬೇಕು. ಈಶಾನ್ಯ ಸಾರಿಗೆ ನಿಗಮಕ್ಕೆ ಪೂರ್ಣ ಕಾಲದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕು. ವಿಜಯಪುರ ವಿಭಾಗದಲ್ಲಿ ನಿರ್ವಾಹಕರಿಗೆ ಸೇವಾ ಮುಂಬಡ್ತಿ ನೀಡಿ ಸಾರಿಗೆ ನಿಯಂತ್ರಕರನ್ನಾಗಿ ನಿಯೋಜಿಸಬೇಕು. ಮಹಿಳಾ ಕಾರ್ವಿುಕರ ಆರೋಗ್ಯ ಮತ್ತು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ನಗರ ಸಾರಿಗೆಯಲ್ಲಿ ಕನಿಷ್ಠ 20 ಅನುಸೂಚಿಗಳನ್ನು ಎ.ಬಿ. ಮಾಡಿ ಸಾರಿಗೆ ಆದಾಯವನ್ನು ಹೆಚ್ಚಿಸಬೇಕು. ಸೇವಾ ಜೇಷ್ಠತೆ ಆಧಾರದ ಮೇಲೆ ವಿಜಯಪುರ ವಿಭಾಗದ ಎಲ್ಲ ಘಟಕಗಳಲ್ಲಿ ಡ್ಯೂಟಿ ರೋಟಾ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಅಧ್ಯಕ್ಷ ಶಿವಾಜಿ ರಜಪೂತ, ಟಿ.ಡಿ.ಬೆಳಗಲ್, ಎಂ.ಎನ್. ನದಾಫ್, ಶರಣಪ್ಪ ಅಥಣಿ, ವಿ.ಆರ್. ಪಟ್ಟಣಶೆಟ್ಟಿ, ಬಿ.ಎಂ.ತೇರದಾಳ, ಎಂ.ಎಚ್. ಮಾರನಬಸರಿ, ಸಿ.ಎಲ್. ಬರನಗೋಳ, ರಫೀಕ್ ನದಾಫ್, ಎಂ.ಎಂ, ಮುಲ್ಲಾ, ವಿಕಾರ ಕರನಾಳ, ನೂರ್ ಸೌದಾಗರ, ಜಿ.ಜಿ. ಬಿರಾದಾರ, ಯಮನಪ್ಪ ಚಲವಾದಿ, ರಾಮಣ್ಣ ಅಂದೇಲಿ, ಬಿ.ವಿ.ಗುಳೇದ, ಎಸ್.ಸಿ.ಸಿಂಧೆ, ಎ.ಎಂ.ಅವಟಿ, ಜಿ.ಸಿ.ಬಿರಾದಾರ, ನಿಂಗಪ್ಪ ಕವಲಗಿ, ಜಾಫರ್ ಮುಲ್ಲಾ, ರವಿ ಜುಮನಾಳ, ಪವನ ಗುನ್ನಾಪುರ, ಡಿ.ಎನ್. ಚಪ್ಪರಬಂದ್, ಎ.ಡಿ. ಶಹಾಪೇಟಿ ಸೇರಿ 400 ಜನ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.