ಪರಿಹಾರಕ್ಕೆ ಪರಿಗಣಿಸದಿದ್ದರೆ ಪ್ರತಿಭಟನೆ

ವಿಜಯಪುರ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಬಸವನಬಾಗೇವಾಡಿ, ನಿಡಗುಂದಿ ಮತ್ತು ಕೊಲ್ಹಾರ ವಂಚಿತಗೊಂಡಿದ್ದು ಈ ಕೂಡಲೇ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಪದಾಕಾರಿಗಳು ಆಗ್ರಹಿಸಿದ್ದಾರೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ಜಿಲ್ಲೆ ಇನ್ನುಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲಾಗಿದೆ. ಆದರೆ, ಈ ಮೂರು ತಾಲೂಕುಗಳಲ್ಲಿ ಬರವಿಲ್ಲವೆಂದು ಅಕಾರಿಗಳು ಅವೈಜ್ಞಾನಿಕ ವರದಿ ನೀಡಿದ್ದಾರೆ. ಎಸಿ ಕೊಠಡಿಯಲ್ಲಿ ಕುಳಿತು ವರದಿ ಮಾಡಿರುವ ಕಂದಾಯ ಅಕಾರಿಗಳು ಇನ್ನೊಮ್ಮೆ ಈ ಕ್ಷೇತ್ರಗಳ ಸ್ಥಿತಿ ಕಣ್ತೆರೆದು ನೋಡಬೇಕು. ಮತ್ತು ಬೆಳೆ ಹಾನಿ ಬಗ್ಗೆ ಮತ್ತೊಮ್ಮೆ ವರದಿ ನೀಡಿ ಪರಿಹಾರಕ್ಕೆ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಮಲತಾಯಿ ಧೋರಣೆ ಸಲ್ಲ: ಕಳೆದ ಮೂರ‌್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರವಿದೆ. ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂಥ ಸಂದಿಗ್ಧತೆಯಲ್ಲಿ ಅಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಬಸವನಬಾಗೇವಾಡಿ ಸೇರಿದಂತೆ ನೂತನ ತಾಲೂಕುಗಳಾದ ನಿಡಗುಂದಿ ಹಾಗೂ ಕೊಲ್ಹಾರ ಇವುಗಳನ್ನು ಸಹ ಬರಪೀಡಿತ ಪಟ್ಟಿಯಿಂದ ಕೈ ಬಿಟ್ಟು ಮಲತಾಯಿ ಧೋರಣೆ ಅನುಸರಿಸಲಾಗಿದೆ. ಬಸವನಬಾಗೇವಾಡಿ ತಹಸೀಲ್ದಾರ್ ಮತ್ತು ಕೃಷಿ ಅಕಾರಿಗಳು ಬೆಳೆ ಹಾನಿ ಸಮೀಕ್ಷೆ ನಡೆಸಿ ನೈಜ ವರದಿ ಕಳುಹಿಸಿದ್ದರೂ ಸರ್ಕಾರ ವರದಿ ಮಾನ್ಯ ಮಾಡಿಲ್ಲ. ಹೀಗಾಗಿ ಕೂಡಲೇ ಬರಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕೆಂದರು.

ಬೆಳೆ ಹಾನಿ ವಿವರ: 2018-2019ನೇ ಸಾಲಿನ ಮುಂಗಾರಿನಲ್ಲಿ ಅಂದಾಜು 31.20 ಕೋಟಿ ರೂ. ವೌಲ್ಯದ ಬೆಳೆ ಹಾನಿಯಾಗಿದೆ. ದೊಡ್ಡ ರೈತರು 18.20 ಕೋಟಿ ರೂ. ಹಾಗೂ ಸಣ್ಣ ಮತ್ತು ಅತೀ ಸಣ್ಣ ರೈತರು 12.90 ಕೋಟಿ ರೂ. ವೌಲ್ಯದ ಬೆಳೆ ಹಾನಿ ಅನುಭವಿಸಿದ್ದಾರೆ. ಹಿಂಗಾರಿನಲ್ಲಿ 24.49 ಕೋಟಿ ರೂ. ವೌಲ್ಯದ ಬೆಳೆ ಹಾನಿ ಸೇರಿದಂತೆ ಒಟ್ಟು 55 ಕೋಟಿ ರೂ. ವೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತ ಸಮಗ್ರ ವರದಿ ಸರ್ಕಾರಕ್ಕೂ ಕಳುಹಿಸಲಾಗಿದೆ. ಅದಾಗ್ಯೂ ರಾಜ್ಯ ಬರ ನಿವಾರಣ ಕೋಶದವರು ಬಸವನಬಾಗೇವಾಡಿಯಲ್ಲಿ ಸಕಾಲಕ್ಕೆ ಮಳೆಯಾಗಿದೆ ಎಂದು ಬರ ಪಟ್ಟಿಯಿಂದ ಕೈಬಿಟ್ಟಿವೆ. ಆದ್ದರಿಂದ ಕೂಡಲೇ ಎಚ್ಚೆತ್ತುಕೊಂಡು ಸತ್ಯಾಂಶ ಅರಿತು ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕಾಧ್ಯಕ್ಷ ಸಿದ್ರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ಹೊನಕೇರಪ್ಪ ತೆಲಗಿ, ಜಯಶ್ರೀ ಜಂಗಮಶೆಟ್ಟಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಸರ್ಕಾರದ ವಿರುದ್ಧ ಆಕ್ರೋಶ: ಸರ್ಕಾರ ಶೈಶವಾಸ್ಥೆಯಲ್ಲಿದೆ. ರೈತರ ಹಿತ ಪರಿಗಣಿಸುತ್ತಿಲ್ಲ. ರೈತರ ಹಣದಲ್ಲಿ ರೆಸಾರ್ಟ್ ರಾಜಕಾರಣ ಮಾಡುತ್ತಿದೆ ಎಂದು ಅರವಿಂದ ಕುಲಕರ್ಣಿ ಆರೋಪಿಸಿದರು.
ರೈತ ಸಾಲ ಮನ್ನಾ ಹಣ ಇನ್ನೂ ಪಾವತಿಯಾಗಿಲ್ಲ. ಬರ ಪರಿಹಾರ ಹಣ ಕೂಡ ಸಂದಾಯವಾಗಿಲ್ಲ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಲವಾಗಿದೆ. ಅಕಾರ ಶಾಶ್ವತವಲ್ಲ ಎಂಬುದನ್ನು ಸರ್ಕಾರ ಅರಿಯಬೇಕು. ಅರಿತು ಜನಪರ ಆಡಳಿತ ನೀಡಲು ಮುಂದಾಗಬೇಕು. ಇಲ್ಲವಾದಲ್ಲಿ ಜನರೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.

ಜಿಲ್ಲೆ ರಾಜಕಾರಣಿಗಳು ವೈಯಕ್ತಿಕ ಪ್ರತಿಷ್ಠೆ ಬದಿಗೊತ್ತಿ ರೈತರ ಹಿತ ಕಾಯಲು ಮುಂದಾಗಬೇಕು. ಇಲ್ಲವಾದಲ್ಲಿ ಸಚಿವರ ಮನೆ ಮುಂದೆ ಧರಣಿ ಕುಳಿತುಕೊಳ್ಳಲಾಗುವುದು. ಜಿಲ್ಲೆಯ ಮೂರು ಸಚಿವರು ಮತ್ತು ಇನ್ನುಳಿದ ಶಾಸಕರು ಸೇರಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇವರಿಗೆ ನಿಜವಾದ ರೈತರ ಕಾಳಜಿಯಿಲ್ಲ.
ಅರವಿಂದ ಕುಲಕರ್ಣಿ, ಅಖಂಡ ರೈತ ಕರ್ನಾಟಕದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *