ಪಕ್ಷಾತೀತವಾಗಿ ಭಾಗವಹಿಸಿ

ಬಸವನಬಾಗೇವಾಡಿ: ಕಗ್ಗೋಡದಲ್ಲಿ ಡಿ.24 ರಿಂದ 8 ದಿನ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಉತ್ಸವ ಭಾರತೀಯರ ಸ್ವಾಭಿಮಾನದ ಸಂಗಮವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ. ಕಲ್ಲೂರ ಹೇಳಿದರು.

ಸ್ಥಳೀಯ ವಿರಕ್ತಮಠದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ರಥಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಗತ್ತಿಗೆ ಉನ್ನತ ಸಂದೇಶ ಸಾರಿದ ಭಾರತದ ಹಿರಿಮೆ ಕುರಿತು ಎಲ್ಲ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ಎಲ್ಲ ಪಕ್ಷಗಳ, ಸಮುದಾಯಗಳ ಮುಖಂಡರನ್ನು ಆಹ್ವಾನಿಸಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಉತ್ಸವದ ಮೂಲಕ ಧರ್ಮ, ಸಂಸ್ಕೃತಿಯ ಶ್ರೇಷ್ಠತೆ ಎತ್ತಿ ಹಿಡಿಯುವ ಕೆಲಸವಾಗಬೇಕು. ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

ತಾಲೂಕಿನಾದ್ಯಂತ ರಥಯಾತ್ರೆ ಸಂಚರಿಸಲು ಸಹಕರಿಸಿದ ಮುಖಂಡರನ್ನು ಸನ್ಮಾನಿಸಲಾಯಿತು. ಮಸಬಿನಾಳ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ, ಉತ್ಸವ ಸಮಿತಿ ತಾಲೂಕು ಅಧ್ಯಕ್ಷ ಎಸ್.ಎ. ದೇಗಿನಾಳ ಮಾತನಾಡಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಪ್ರಾಚಾರ್ಯ ಸುರೇಶಗೌಡ ಪಾಟೀಲ, ಸಾಹಿತಿ ಲ.ರು. ಗೊಳಸಂಗಿ, ಶಿವಪುತ್ರ ಕೆಂಭಾವಿ, ಅಂಬೋಜಿ ಪವಾರ ಇತರರಿದ್ದರು. ರಾಜುಗೌಡ ಚಿಕ್ಕೊಂಡ ಸ್ವಾಗತಿಸಿದರು. ಪ್ರಭಾಕರ ಖೇಡದ, ಕಾಶೀನಾಥ ಅವಟಿ ನಿರೂಪಿಸಿದರು. ವಿನೂತ ಕಲ್ಲೂರ ವಂದಿಸಿದರು.

ಉತ್ಸವ ರಥಯಾತ್ರೆಗೆ ಅದ್ದೂರಿ ಸ್ವಾಗತ: ಭಾರತೀಯ ಸಂಸ್ಕೃತಿ ಉತ್ಸವ-5 ನಿಮಿತ್ತ ತಾಲೂಕಿನಲ್ಲಿ ಹಮ್ಮಿಕೊಂಡ ರಥಯಾತ್ರೆಗೆ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಡೊಳ್ಳು ವಾದನದೊಂದಿಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ತಾಪಂ ಅಧ್ಯಕ್ಷೆ ಬೇಬಿ ಇಂಗಳೇಶ್ವರ, ಉತ್ಸವ ಉಸ್ತುವಾರಿ ಬಿ.ಕೆ. ಕಲ್ಲೂರ, ಅಧ್ಯಕ್ಷ ಎಸ್.ಎ. ದೇಗಿನಾಳ, ಪ್ರಧಾನ ಕಾರ್ಯದರ್ಶಿ ಕಾಶೀನಾಥ ಅವಟಿ, ಪ್ರಭಾಕರ ಖೇಡದ, ಸಂಗನಗೌಡ ಚಿಕ್ಕೊಂಡ, ಜಗದೀಶ ಕೊಟ್ರಶೆಟ್ಟಿ, ಸಂಗನಗೌಡ ಪಾಟೀಲ (ಕೌಲಗಿ), ರವಿ ಪಡಶೆಟ್ಟಿ, ರವಿ ಚಿಕ್ಕೊಂಡ, ಬಸವರಾಜ ಗೊಳಸಂಗಿ, ಬಸವರಾಜ ಗಚ್ಚಿನವರ, ಶರಣು ವಾಲಿಕಾರ, ರಾಜು ಬಂಡಿವಡ್ಡರ, ವಿಶ್ವನಾಥ ಹಿರೇಮಠ, ಸಂಗಮೇಶ ಮುಳವಾಡ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.