ಯುವ ಬರಹಗಾರರಿಗೆ ವೇದಿಕೆ ಸಿಗಲಿ

ವಿಜಯಪುರ: ಯುವ ಬರಹಗಾರರಿಗೆ ವೇದಿಕೆಗಳು ಸಿಗಬೇಕು. ಆಗ ಅವರ ಪ್ರತಿಭೆ ಪ್ರಕಾಶಿಸಬಲ್ಲದು ಎಂದು ನ್ಯಾಯವಾದಿ ಕೆ.ಎ್. ಅಂಕಲಗಿ ಹೇಳಿದರು.
ಇಲ್ಲಿನ ರಾಜಾಜಿನಗರದ ಪ್ರಗತಿ ಪ್ರೌಢಶಾಲೆಯಲ್ಲಿ ಜಗಜ್ಯೋತಿ ಸಾಹಿತ್ಯ ವೇದಿಕೆಯ 25ನೇ ವಾರ್ಷಿಕೋತ್ಸವ ನಿಮಿತ್ತ ಶನಿವಾರ ನಡೆದ ಬೆಳ್ಳಿ ಸಂಭ್ರಮ ಹಾಗೂ ಜಿಲ್ಲಾಮಟ್ಟದ ಕವಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸತತ ಓದು, ಪರಿಶ್ರಮ ಇದ್ದಾಗ ಅದೃಷ್ಟದ ಬಾಗಿಲು ತೆರೆಯುತ್ತದೆ. ಬರೆದ ಸಾಹಿತ್ಯ ಓದುಗರ ಮನಮುಟ್ಟಿದಾಗ ಲೇಖಕನ ಮನಸ್ಸು ಮುದಗೊಳ್ಳುತ್ತದೆ ಎಂದರು.
ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ. ಬಿರಾದಾರ ಮಾತನಾಡಿ, ಉತ್ಕೃಷ್ಟ ಬರಹ ಸ್ಮರಣೆಯಲ್ಲಿ ಉಳಿದು ಸಾಹಿತ್ಯ ಪ್ರಜ್ಞೆಯನ್ನು ಉದ್ದಕ್ಕೂ ಪ್ರದರ್ಶಿಸುತ್ತ ಹೋಗುತ್ತದೆ. ಸಾಹಿತ್ಯ ರಚನೆಯಲ್ಲಿ ಅಧ್ಯಯನಶೀಲತೆ ಮುಖ್ಯವಾಗಿದ್ದು, ಎಷ್ಟು ಬರಿದಿದ್ದೇವೆ ಎಂಬುದು ಮುಖ್ಯವಲ್ಲ, ಏನನ್ನು ಬರೆದಿದ್ದೇವೆ ಎಂಬುದು ಗಮನಾರ್ಹ. ಕವನಗಳಲ್ಲಿ ಕಾವ್ಯಸತ್ವ ಇದ್ದಾಗ ಓದುಗರ ಗಮನ ಸೆಳೆಯುತ್ತದೆ. ಜಗಜ್ಯೋತಿ ಸಾಹಿತ್ಯ ವೇದಿಕೆಯ ಸಮಾಜಮುಖಿ ಕಾರ್ಯಕ್ರಮ ಸ್ತುತ್ಯಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಮಾತನಾಡಿ, ಪ್ರಚಲಿತ ವಿದ್ಯಮಾನಗಳನ್ನು ಆಯ್ದುಕೊಂಡು ವಸ್ತುನಿಷ್ಠವಾಗಿ ಕವಿತೆ ಕಟ್ಟಿದರೆ ಅರ್ಥಪೂರ್ಣವಾಗಿರುತ್ತದೆ. ಕವಿತೆ ರಚಿಸುವವರು ಹಿರಿಯ ಸಾಹಿತಿಗಳ ಕಾವ್ಯವನ್ನು ಹೆಚ್ಚೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಬಬಲೇಶ್ವರ ಪಟ್ಟಣದ ವೈದ್ಯ ಡಾ.ಶಂಕರಗೌಡ ಬಿರಾದಾರ ಅವರಿಗೆ ರಾಷ್ಟ್ರಮಟ್ಟದ ‘ವೈದ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ .ಗು. ಸಿದ್ದಾಪುರ ಅವರು ಕವಿ ಗಂಗಾಧರಯ್ಯ ಜಾಲಿಬೆಂಚಿ ಅವರ ‘ಜೋ ಜೋ ಲಾಲಿ’ ಗ್ರಂಥ ಬಿಡುಗಡೆ ಮಾಡಿದರು. ಸಾಹಿತಿ ಶಂಕರ ಬೈಚಬಾಳ ಕೃತಿ ಪರಿಚಯಿಸಿದರು. ಬಸವನಬಾಗೇವಾಡಿಯ ಶಿವಪ್ರಕಾಶ ಶ್ರೀಗಳು, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈರಣ್ಣ ಶಿರಮಗೊಂಡ, ಬಿ.ಎಂ. ಕೋಕರೆ, ಎಂ.ಎಸ್. ಬಿದರಿ, ಎಚ್.ಎಲ್. ಮಾಲಗಾವಿ, ಎಚ್.ವೈ. ನಾಟಿಕಾರ, ಎ.ಎ. ಸಾವಳಗಿ, ಶಿವಾನಂದ ದಾಶ್ಯಾಳ, ಎಸ್.ಎಸ್. ಜಾಲವಾದಿ, ಜಿ.ಬಿ. ಸೂರಗೊಂಡ, ಎಂ.ಆರ್. ತೋಟದ, ಶ್ರೀನಿವಾಸ ಕುಲಕರ್ಣಿ, ಚಂದ್ರಶೇಖರ ದಾಶ್ಯಾಳ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಮಟ್ಟದ ಕವಿ ಸಮ್ಮೇಳನದಲ್ಲಿ ವಿದ್ಯಾವತಿ ಅಂಕಲಗಿ, ಮಲ್ಲಿಕಾರ್ಜುನ ಅವಟಿ, ಈರಮ್ಮ ಬೋನೂರ, ಪ್ರಭಾಕರ ಖೇಡದ, ಸುಜ್ಞಾನಿ ಪಾಟೀಲ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ತೊದಲಬಾಗಿ, ನಾಗರಾಜ ಎಂ.ಎನ್., ಬಾಬುರಾವ ಕುಲಕರ್ಣಿ, ಸುನಂದಾ ಕಾಖಂಡಕಿ, ಮಹಾದೇವಿ ಪಾಟೀಲ, ಶಿವಾಜಿ ಮೋರೆ, ನೀಲಪ್ಪ ಬನಸೋಡೆ, ರಾಜಶೇಖರ ಕಲ್ಮಠ ಕವನ ವಾಚಿಸಿದರು.

Leave a Reply

Your email address will not be published. Required fields are marked *