ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ನಿರಾಕರಿಸಿದ ಮಹಿಳೆಯನ್ನು ಚಾಕುವಿನಿಂದ ಇರಿದು ಗುರುವಾರ ಕೊಲೆ ಮಾಡಲಾಗಿದೆ.
ಆರೋಪಿ ಸುನೀಲ ಅರ್ಜುನ ಮುರಗ್ಯಾಗೋಳ (22) ಎಂಬಾತ ಮೃತ ಮಹಿಳೆ ಸಮೀಪದ ಮನೆಯಲ್ಲೇ ವಾಸವಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ನಿರಾಕರಿಸಿ ಕಿರುಚಾಡಲು ಪ್ರಾರಂಭಿಸಿದಾಗ ಕೊಲೆ ಮಾಡಿದ್ದಾನೆ. ಈ ಕುರಿತು ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಎಚ್.ಎಂ. ಪಾಟೀಲ ತನಿಖೆ ಮುಂದುವರಿಸಿದ್ದಾರೆ.
IndiMurderRapeRural Police StationSalotagiVijayapuraWomenಅತ್ಯಾಚಾರಇಂಡಿಗ್ರಾಮೀಣ ಠಾಣೆತನಿಖೆಮಹಿಳೆ ಕೊಲೆಸಾಲೋಟಗಿ