ಮಾಜಿ ಯೋಧರಿಗೆ ಸನ್ಮಾನ

ವಿಜಯಪುರ: ನಗರದ ಸ್ವತಂತ್ರಯೋಧರ ಕಾಲನಿಯಲ್ಲಿರುವ ಡಾ. ರಾಜಶ್ರೀ ಖುಬಾ (ಅಕ್ಕಿ ಆಸ್ಪತ್ರೆ) ಆವರಣದಲ್ಲಿ ಪತಂಜಲಿ ಯೋಗ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆ 8 ಗಂಟೆಗೆ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಗಿಲ್ ಮಾಜಿ ಯೋಧರಾದ ಬೋಜಪ್ಪ ಕಳಕುಂಟಗಿ, ಶ್ರೀಶೈಲ ಭುಯ್ಯರ್ ಹಾಗೂ ಮಾಣಿ ಮತ್ತು ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ಸುನಂದಾ ಹೊನವಾಡ, ಓಂ ಶಾಂತಿಯ ಶೈಲಜಾ ಅಕ್ಕ, ಆಲಮೇಲದ ಸಾವಯವ ಕೃಷಿಕ ಸುನೀಲ ನಾರಾಯಣಕರ್ ಅವರನ್ನು ಸನ್ಮಾನಿಸಲಾಯಿತು.

ಡಾ. ಅರವಿಂದ ಪಾಟೀಲ, ಡಾ. ವಿದ್ಯಾ ಪಾಟೀಲ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ಡಾ. ರಾಜಶ್ರೀ ಖುಬಾ ಅಧ್ಯಕ್ಷತೆ ವಹಿಸಿದ್ದರು.