More

    ಸ್ವಾಮಿಗಳಿಗೆ ಪವರ್ ಆಫ್ ಅಟಾರ್ನಿ ನೀಡಿಲ್ಲ

    ವಿಜಯಪುರ: ಸ್ವಾಮೀಜಿಗಳಿಗೆ ಏನು ಬೇಕಾದರೂ ಮಾತನಾಡಲು ಯಾರೂ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಅಧಿಕಾರ ಕೊಟ್ಟಿಲ್ಲ. ಮಠಾಧೀಶರು ಧರ್ಮ ಬೋಧನೆ ಮಾಡಿಕೊಂಡು ಗೌರವಯುತವಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹರದ ಶ್ರೀ ವಚನಾನಂದ ಶ್ರೀಗಳ ವಿರುದ್ಧ ಗುಡುಗಿದ್ದಾರೆ.
    ವೀರಶೈವ ಲಿಂಗಾಯತ ಪಂಚಾಮಸಾಲಿ ಪೀಠದ ವತಿಯಿಂದ ಹರಿಹರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬೆಳ್ಳಿಬೆಡಗು ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವಚನಾನನಂದ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ತಮ್ಮ ಸಮಾಜದ ಮೂವರಿಗೆ ಮಂತ್ರಿ ಸ್ಥಾನ ಕೊಡಬೇಕು. ಅದರಲ್ಲೂ ಮುರುಗೇಶ ನಿರಾಣಿಯವರಿಗೆ ಮಂತ್ರಿ ಸ್ಥಾನ ನೀಡಲೇಬೇಕು. ಅವರನ್ನು ಕೈ ಬಿಟ್ಟರೇ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈ ಬಿಡುತ್ತದೆ ಎಂದು ಮುಖ್ಯ ವೇದಿಕೆಯಲ್ಲಿಯೇ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿಗೆ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ಯತ್ನಾಳ ಕಿಡಿಕಾರಿದ್ದಾರೆ.
    ಸ್ವಾಮೀಜಿಗಳು ಸೇರಿದಂತೆ ಇತರರು ಯಾರೂ ಗೊಡ್ಡು ಬೆದರಿಕೆಗಳನ್ನು ಹಾಕತಕ್ಕದ್ದಲ್ಲ. ಅವರ ವರ್ತನೆಯಿಂದ ಪಂಚಮಸಾಲಿ ಸಮಾಜಕ್ಕೆ ಅಪಮಾನವಾಗಿದೆ. ಈಗ ಮಾತನಾಡುವ ಸ್ವಾಮೀಜಿ ಪ್ರವಾಹ ಬಂದಾಗ ಎಲ್ಲಿದ್ದರು? ಆಗ ಏಕೆ ಮಾತನಾಡಲಿಲ್ಲ. ಇದೇ ರೀತಿ ಅವರ ವರ್ತನೆ ಮುಂದುವರಿದರೆ ನಾವು ಯಾವ ಶಾಸಕರೂ ಸುಮ್ಮನೆ ಕೂಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಿರಾಣಿ ವಿರುದ್ಧ ಆಕ್ರೋಶ

    ಮುರುಗೇಶ ನಿರಾಣಿಯನ್ನು ಬಿಜೆಪಿಗೆ ತಂದವರು ನಾನು ಹಾಗೂ ಶ್ರೀಕಾಂತ ಕುಲಕರ್ಣಿ ಎಂದು ಶಾಸಕ ಯತ್ನಾಳ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು. ನಿರಾಣಿ ಅವರನ್ನು ಬೃಹತ್ ಕೈಗಾರಿಕಾ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅವರು. ಅದನ್ನು ನೆನಪಲ್ಲಿ ಇಡಬೇಕು. ಕಾರ್ಯಕ್ರಮಕ್ಕೆ ಕರೆಯಿಸಿ ನಿರಾಣಿಗೆ ಮಂತ್ರಿ ಮಾಡಿ ಎನ್ನುವುದನ್ನು ನಾನು ಖಂಡಿಸುತ್ತೇನೆ ಎಂದರು.
    ಐದು ವರ್ಷ ಕೈಗಾರಿಕಾ ಮಂತ್ರಿ ಆಗಿದ್ದಾಗ ನಾಲ್ಕೈದು ಶುಗರ್ ಫ್ಯಾಕ್ಟರಿ ಮಾಡಿಕೊಂಡಿದ್ದಾರೆ. ನಿರಾಣಿ ಅವರು ಹರಿಹರ ಹಾಗೂ ಕೂಡಲಸಂಗಮ ಎರಡೂ ಪೀಠಗಳನ್ನು ‘ಮೆಂಟೇನ್’ ಮಾಡ್ತಿದ್ದಾರೆ ಎಂದು ಆರೋಪಿಸಿದರು.
    ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂರೂವರೆ ವರ್ಷ ಅಧಿಕಾರದಲ್ಲಿರುತ್ತಾರೆ. ಅವರಿಗೆ ಯಾರೇ ಮಠಾಧೀಶರು ಬೆದರಿಕೆ ಹಾಕುವುದು. ರಾಜಕೀಯ ನಾಯಕರು ಸ್ವಾಮೀಜಿಗಳಿಂದ ಸಿಎಂ ಅವರ ಮೇಲೆ ಒತ್ತಡ ಹಾಕಿಸುವುದು ಸೂಕ್ತ ಅಲ್ಲ ಎಂದರು.

    ಮಂತ್ರಿ ಸ್ಥಾನಕ್ಕೆ ಒತ್ತಡ ಹಾಕಿಲ್ಲ

    ನನಗೂ ಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕು, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿರಬೇಕು ಎಂಬ ಕಾರಣದಿಂದ ನಾನು ಮಂತ್ರಿ ಸ್ಥಾನಕ್ಕೆ ಯಾವುದೇ ಒತ್ತಡ ಹಾಕಿಲ್ಲ. ಕೇವಲ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯವಾಗಿ ಅನ್ಯಾಯವಾದಾಗ ಮಾತ್ರ ಧ್ವನಿ ತೆಗೆಯುತ್ತೇನೆ. ನಾವೆಲ್ಲ ಶಾಸಕರೂ ಯಡಿಯೂರಪ್ಪ ಅವರ ಹಿಂದಿದ್ದೇವೆ. ಯೂರೂ ಅವರನ್ನು ಬ್ಲಾಕ್‌ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts