ಮಚ್ಚಿನಿಂದ ಹಲ್ಲೆ ನಡೆಸಿದ ಗುಂಪು

ವಿಜಯಪುರ: ಇಲ್ಲಿನ ಮಾಂಗಗಾರುಡಿ ಕಾಲನಿಯಲ್ಲಿ ಹಣಕಾಸಿನ ವ್ಯವಹಾರಕ್ಕಾಗಿ ಐವರ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದೆ.
ಸ್ಥಳೀಯ ನಿವಾಸಿ ಉಮೇಶ ಗಾಯಕವಾಡ ಅವರಿಗೆ ಗಾಯಗಳಾಗಿವೆ. ಉಮೇಶ ಕಾಶಿನಾಥ ಕಾಂಬಳೆ, ಕರಣ ಮಾರುತಿ ಕಾಂಬಳೆ, ಅಮಿತ ಮಾರುತಿ ಕಾಂಬಳೆ, ದಶರಥ ಮಾರುತಿ ಕಾಂಬಳೆ ಹಾಗೂ ಅರ್ಜುನ ಮಾರುತಿ ಕಾಂಬಳೆ ಮೇಲೆ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ: ಉಮೇಶ ಗಾಯಕವಾಡ ಹಾಗೂ ಉಮೇಶ ಕಾಂಬಳೆ ಮಧ್ಯೆ ಕೈಗಡ ಹಣ ಕೊಡುವ ಮತ್ತು ತೆಗೆದುಕೊಳ್ಳುವ ವ್ಯವಹಾರ ಇತ್ತು. ಹೀಗಾಗಿ ಉಮೇಶ ಗಾಯಕವಾಡನಿಂದ ಹಣ ಪಡೆಯಲು ಈ ಗಲಾಟೆ ನಡೆದಿದೆ. ಚಾಂದನಿ ಹಾಲ್ ಬಳಿಯ ಮುಖ್ಯ ರಸ್ತೆಯಲ್ಲಿ ಉಮೇಶ ಗಾಯಕವಾಡನನ್ನು ತಡೆದ ಆರೋಪಿಗಳು ಹಣ ಕೊಡಲು ಒತ್ತಾಯಿಸಿ ಜಗಳ ತೆಗೆದಿದ್ದಾರೆ. ಗಾಯಕವಾಡಗೆ ಥಳಿಸುವುದನ್ನು ಬಿಡಿಸಲು ಬಂದ ಇತರ ಮೂವರಿಗೂ ಹೊಡೆದಿದ್ದಾರೆ. ಮಚ್ಚಿನಿಂದ ಹೊಡೆದಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾಗಿ ಉಮೇಶ ಗಾಯಕವಾಡ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *