More

    ಸಂಚಾರಿ ನಿಯಮ ಪಾಲಿಸಿ

    ವಿಜಯಪುರ: ವಾಹನ ಸವಾರರು ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಅಪಘಾತಗಳು ಸಂಭವಿಸದಂತೆ ಜಾಗೃತಿ ವಹಿಸಬೇಕೆಂದು ಪೊಲೀಸ್ ಅಧಿಕಾರಿ ಆರೀಫ್​ ಮುಶಾಪುರಿ ಹೇಳಿದರು.
    ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಇತ್ತೀಚೆಗೆ ಜನರು ಸಂಚಾರಿ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಅದರಿಂದ ಅಪಘಾತಗಳು ಅತಿಹೆಚ್ಚು ದಾಖಲಾಗುತ್ತಿವೆ. ಬದುಕು ಭಗವಂತನ ಸುಂದರ ಕಾಣಿಕೆಯಾಗಿರುವುದರಿಂದ ನಮ್ಮ ಜೀವನವನ್ನು ನಾವೇ ಕಾಪಾಡಿಕೊಳ್ಳಬೇಕು. ಅದು ಮತ್ತೋಬ್ಬರಿಂದ ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
    ಸವಾರರು ವಾಹನಗಳ ವಿಮೆ, ನೋಂದಣಿ ಪ್ರಮಾಣ ಪತ್ರ, ಚಾಲನಾ ಪತ್ರ, ಹೊಗೆ ತಪಾಸಣೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ವಾಹನಗಳನ್ನು ಚಲಾಯಿಸಬೇಕು. ಮಕ್ಕಳು ವಾಹನಗಳನ್ನು ಚಲಾಯಿಸಿದರೆ ಅದು ಅಪರಾಧ ಹಾಗೂ ಅಪಾಯಕ್ಕೆ ಅಡಿಪಾಯ ಎಂದರು.
    ವಿಕಾಸ ಸಂಸ್ಥೆ ಸಂಸ್ಥಾಪಕ ಬಸವರಾಜ ಕೌಲಗಿ ಮಾತನಾಡಿ, ದೇಶದಲ್ಲಿ ಕುಡಿದು ಅತಿವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಸಂಚಾರಿ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷಿತವಾಗಿ ವಾಹನಗಳನ್ನು ಚಲಿಸಬೇಕು ಎಂದು ತಿಳಿಸಿದರು.
    ಪ್ರಾಚಾರ್ಯ ಡಿ. ಎಲ್.ಬನಸೋಡೆ ಪ್ರಾಸ್ತಾವಿಕ ಮಾತನಾಡಿದರು. ಮಹಾವಿದ್ಯಾಲಯದ ಆಡಳಿತಾಧಿಕಾರಿ ಬಿ.ಪರಶುರಾಮ, ಸಂಯೋಜಕ ಕೆ.ಲಕ್ಷ್ಮಿನಾರಾಯಣ, ವಿಜಯಪುರ ಸಂಚಾರಿ ಠಾಣೆ ಪೇದೆ ಎಸ್. ಕೆ.ಗೋಟ್ಯಾಳ, ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts