ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿ

ವಿಜಯಪುರ: ವಿದ್ಯಾರ್ಥಿಗಳು ಮೊಬೈಲ್, ಇಂಟರ್‌ನೆಟ್ ಸಹವಾಸ ತ್ಯಜಿಸಿಬೇಕೆಂದು ನಿವೃತ್ತ ಕರ್ನಲ್ ಬಿ.ಎಸ್.ಹಿಪ್ಪರಗಿ ಹೇಳಿದರು.
ನಗರದ ಎಕ್ಸಲಂಟ್ ಪಿಯು ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರೊೃೀತ್ಸವದಲ್ಲಿ ಅವರು ಮಾತನಾಡಿದರು.
ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಯುವಕರು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಪರೋಪಕಾರ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆ ಸಂಸ್ಥಾಪಕ ಚೇರ್ಮನ್ ಬಸವರಾಜ ಕೌಲಗಿ ಮಾತನಾಡಿ, ಮಹಾನ್ ವ್ಯಕ್ತಿಗಳಾಗಲು ಶ್ರಮಪಟ್ಟು ಅಧ್ಯಯನ ಮಾಡಬೇಕು. ನೈತಿಕ ಹಾಗೂ ಬೌದ್ಧಿಕ ಬುನಾದಿ ಮೇಲೆ ವ್ಯಕ್ತಿತ್ವ ವಿಕಾಸ ಮಾಡಿಕೊಂಡು ನಾಡಿಗೆ ಕೀರ್ತಿ ತರುವ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.
ಡಾ.ಜಕ್ಕಪ್ಪ ನಾಲಾಲಾ, ಕಾಲೇಜಿನ ಹಾಗೂ ಆಕ್ಸರ್ಡ್ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಾಂಶುಪಾಲ ಡಿ.ಎಲ್. ಬನಸೋಡೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಂಹಿತಾ ನಾಯಕ ಮತ್ತು ಮಲ್ಲಿಕಾರ್ಜುನ ಸುಂತ್ಯಾಳ ನಿರೂಪಿಸಿದರು. ಆಕ್ಸಫರ್ಡ್ ಶಾಲೆ ಮುಖ್ಯಶಿಕ್ಷಕ ಜೆ.ಎಂ.ಇನಾಮದಾರ ವಂದಿಸಿದರು.

Leave a Reply

Your email address will not be published. Required fields are marked *