22.5 C
Bengaluru
Sunday, January 19, 2020

ಮಾನವ ಬಂಡವಾಳವೇ ಪ್ರಗತಿ ಮೂಲ

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

<< ಯುವ ಶಕ್ತಿ ಸಂಗಮದ ವೈಭವ > ಡಾ. ಆರ್. ಬಾಲಸುಬ್ರಹ್ಮಣ್ಯಂ ಅಭಿಮತ >>

ವಿಜಯಪುರ: ದೇಶದ ಅಭಿವೃದ್ಧಿ ಮಾನವ ಬಂಡವಾಳದ ಸದ್ಭಳಕೆಯಲ್ಲಿ ಅಡಗಿದೆ. ಯಾವ ದೇಶ ಮಾನವ ಬಂಡವಾಳವನ್ನು ಸಮರ್ಪಕವಾಗಿ ಬಳಸಿಕೊಂಡಿದೆಯೋ ಆ ರಾಷ್ಟ್ರ ಆರ್ಥಿಕವಾಗಿ ಪ್ರಗತಿ ಹೊಂದಿರುತ್ತದೆ ಎಂದು ಹೆಗ್ಗಡದೇನಕೋಟೆಯ ವಿಲೀಡ್ ಅಧ್ಯಕ್ಷ ಡಾ.ಆರ್. ಸುಬ್ರಮಣ್ಯಂ ಹೇಳಿದರು.

ಕಗ್ಗೋಡದ ರಾಮನಗೌಡ ಪಾಟೀಲ ಯತ್ನಾಳ ಗೋರಕ್ಷಾ ಕೇಂದ್ರದ ಆವರಣದಲ್ಲಿ ಭಾರತ ವಿಕಾಸ ಸಂಗಮ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ವಿಜಯಪುರದ ಸಿದ್ದೇಶ್ವರ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ನಡೆದ ‘ಯುವ ಶಕ್ತಿ ಸಂಗಮ’ದಲ್ಲಿ ಅವರು ಮಾತನಾಡಿದರು.

ಜಗತ್ತಿನ ಯಾವುದೇ ರಾಷ್ಟ್ರವನ್ನು ಉದಾಹರಣೆಗೆ ತೆಗೆದುಕೊಳ್ಳಿ ಎಲ್ಲಿ ಮಾನವ ಬಂಡಾವಳದ ಅಭಿವೃದ್ಧಿ ಆಗಿದೆಯೋ ಆ ರಾಷ್ಟ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಆರ್ಥಿಕ ಬಂಡವಾಳಕ್ಕಿಂತ ಮಾನವ ಬಂಡವಾಳ ಬಳಸಿಕೊಳ್ಳುವ ಕೆಲಸವಾಗಬೇಕು. ಸ್ವಾಮಿ ವಿವೇಕಾನಂದರ ಆಶಯದಂತೆ ಯುವ ಸಿಂಹಗಳನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.

ಮಾನವ ಬಂಡವಾಳವನ್ನು ದೈಹಿಕವಾಗಿ, ಮಾನಸಿಕವಾಗಿ ಅಭಿವೃದ್ಧಿಪಡಿಸಬೇಕು ಎಂದ ಅವರು, ಮಾನವ ಬಂಡವಾಳವನ್ನು ದೈಹಿಕವಾಗಿ ಅಭಿವೃದ್ಧಿ ಪಡಿಸಲು ಯೋಗ ತುಂಬ ಸಹಕಾರಿ. ಯೋಗ ಪ್ರಾಥಮಿಕ ಶಾಲಾ ಹಂತದಲ್ಲೇ ಕಡ್ಡಾಯಗೊಳಿಸಬೇಕು. ಆದರೆ, ಕೆಲವರು ಅದಕ್ಕೆ ಕೇಸರೀಕರಣ ಪಟ್ಟ ಕಟ್ಟುತ್ತಿರುವುದು ದುರದೃಷ್ಟಕರ. ಅದೇ ಅಮೆರಿಕೆಯಲ್ಲಿ ಯೋಗಕ್ಕಾಗಿ 30 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಾಗಿದೆ. ಯೋಗದಿಂದ ಮಾನವ ಬಂಡವಾಳ ಹೆಚ್ಚಲಿದ್ದು, ದೇಶದ ಆರ್ಥಿಕತೆಗೆ ಪೂರಕ ಎಂದರು.

ಮುಂದುವರಿದ ರಾಷ್ಟ್ರ

ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಗ್ರೀಸ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ಆರ್ಥಿಕವಾಗಿ ಹಿನ್ನಡೆ ಅನುಭವಿಸಿದವರು. ಏಸುಕ್ರಿಸ್ತನ ಕಾಲಾನಂತರದಲ್ಲಿ ಆ ಎಲ್ಲ ರಾಷ್ಟ್ರಗಳು ಒಗ್ಗೂಡಿ ಯಾವ ರಾಷ್ಟ್ರ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದರ ಬಗ್ಗೆ ಅಧ್ಯಯನ ವರದಿ ಸಿದ್ಧ ಮಾಡಿ ಆ ರಾಷ್ಟ್ರದಿಂದ ಸಲಹೆ ಪಡೆಯುವ ಮಹತ್ತರ ಜವಾಬ್ದಾರಿಯನ್ನು ಖ್ಯಾತ ಅರ್ಥಶಾಸಜ್ಞ ಆ್ಯಂಗಸ್ ಮ್ಯಾಡಿಸನ್ ಅವರಿಗೆ ವಹಿಸಿತು. ಮ್ಯಾಡಿಸನ್ ಸುದೀರ್ಘವಾದ ಸಂಶೋಧನೆ ನಡೆಸಿದ ವರದಿಯಲ್ಲಿ 1 ನೇ ಶತಮಾನದಿಂದ 17 ನೇ ಶತಮಾನದವರೆಗೂ ನಿರಂತರವಾಗಿ ಪ್ರಗತಿ ಕಂಡ ರಾಷ್ಟ್ರಗಳ ಸಾಲಿನಲ್ಲಿ ಭಾರತ ಅಗ್ರ ಸ್ಥಾನ ಪಡೆದಿತ್ತು ಎಂದರು.

1600 ವರ್ಷಗಳ ಕಾಲ ಅಗಣಿತ ಸಂಪತ್ತಿನಿಂದಾಗಿ ನಿರಂತರವಾಗಿ ಬೆಳೆದಿದ್ದ ರಾಷ್ಟ್ರ 300 ವರ್ಷಗಳಲ್ಲಿ ಎಲ್ಲವನ್ನೂ ಕಳೆದುಕೊಂಡಿತು. ಪರಕೀಯರ ದಾಳಿ ಎಂದು ಸರಳವಾಗಿ ವಿಶ್ಲೇಷಿಸಬಹುದಾಗಿದೆ, ಆದರೆ ಪರಕೀಯರ ದಾಳಿಯಿಂದ ನಾವು ಕೇವಲ ಸಂಪತ್ತನ್ನು ಮಾತ್ರ ಕಳೆದುಕೊಂಡಿದ್ದೇವೆಯೇ? ಆದರ್ಶಗಳನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಪರಾಮರ್ಶಿಸಿಕೊಳ್ಳಬೇಕೆಂದರು ಡಾ.ಬಾಲಸುಬ್ರಹ್ಮಣ್ಯಂ ಹೇಳಿದರು.

ಅಪೌಷ್ಟಿಕತೆ ಕೊರತೆ

ಸ್ವಾತಂತ್ರೃ ಬಂದು 70 ವರ್ಷಗಳು ಗತಿಸಿದರೂ ಶೇ.54 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಶೇ.40 ರಷ್ಟು ಜನರಿಗೆ ಇಂದಿಗೂ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಅಭಿವೃದ್ಧಿಯ ಅಳತೆಗೋಲು ಆರ್ಥಿಕತೆ. ಆ ಆರ್ಥಿಕತೆ ಅಭಿವೃದ್ಧಿಗೆ ಗುಡ್ಡುಗಾಡು ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮುಖ್ಯ. ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಪ್ರಮುಖ. ಹಗಲು ರಾತ್ರಿ ದೇಶಾಭಿವೃದ್ಧಿಯಲ್ಲಿ ಯುವ ಜನತೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಾವೆಲ್ಲ ಭಗತ್ ಸಿಂಗ್ ಮತ್ತೆ ಹುಟ್ಟಲಿ ಎಂದು ಆಶಿಸುತ್ತೇವೆ. ಆದರೆ ನಮ್ಮ ಮನೆಯಲ್ಲಲ್ಲ; ಪಕ್ಕದ ಮನೆಯಲ್ಲಿ ಆತ ಹುಟ್ಟಬೇಕು. ಏಕೆಂದರೆ ಯಾರೂ ತಮ್ಮ ಮಗ ಸನ್ಯಾಸಿ ಆಗಲಿ ಎಂದು ಭಾವಿಸುವುದಿಲ್ಲ. ಈ ಮನೋಭಾವ ಬದಲಾಗಬೇಕೆಂದು. ಪ್ರತೀ ಮನೆಯಿಂದ ದೇಶಾಭಿಮಾನದ ಕಹಳೆ ಮೊಳಗಬೇಕೆಂದರು.

ವಾಸ್ಕೋಡ ಗಾಮಾ ಭಾರತ ಕಂಡು ಹಿಡಿದಿಲ್ಲ

ಯುವ ಜನತೆ ದೇಶದ ಇತಿಹಾಸ ಅರಿಯಬೇಕು. ಮೂಲ ಇತಿಹಾಸ ಮರೆಮಾಚಿ ನಾವಿಂದು ಅನ್ಯರು ಬರೆದ ಇತಿಹಾಸ ಅಭ್ಯಸಿಸುತ್ತಿದ್ದೇವೆ. ವಾಸ್ತವಲ್ಲಿ ವಾಸ್ಕೋ ಡ ಗಾಮಾ ಭಾರತ ಕಂಡು ಹಿಡಿಯಲಿಲ್ಲ. ಅದಾಗ್ಯೂ ಇಂದಿಗೂ ನಾವದನ್ನೇ ನಂಬಿದ್ದೇವೆ. ವಾಸ್ಕೋ ಡ ಗಾಮಾ ಕಂಡು ಹಿಡಿಯುವ ಮೊದಲೇ ಭಾರತ ಇಲ್ಲಿತ್ತು. ಇಲ್ಲಿನ ನಾಗರಿಕತೆ ಸಾಕಷ್ಟು ಮುಂದುವರಿದಿತ್ತು. ಗಾಮಾ ಕೇಫ್ ಆಫ್ ಗುಡ್ ಹೋಪ್ ತಲುಪಿದಾಗ ಅಲ್ಲಿ ಭಾರತೀಯ ನಾವಿಕರು ಆತನಿಗೆ ಸಿಕ್ಕಾಗ ಆತ ಅಚ್ಚರಿಕೊಂಡು ಅವರನ್ನು ಪರಿಚಯಿಸಿಕೊಂಡ. ತನಗೂ ಭಾರಕ್ಕೆ ಕರೆದೊಯ್ಯುವಂತೆ ಮನವಿ ಮಾಡಿದ. ಭಾರತೀಯ ನಾವಿಕರು ಆತನನ್ನು ಭಾರತಕ್ಕೆ ಕರೆತಂದು ದೇಶ ಪರಿಚಯಿಸಿದರು. ಇದು ವಾಸ್ತವ ಎಂದು ಬಾಲಸುಬ್ರಹ್ಮಣ್ಯಂ ಇತಿಹಾಸದ ಪುಟ ಬಿಚ್ಚಿಟ್ಟರು.

ಯುವ ಶಕ್ತಿ ರಾಷ್ಟ್ರದ ಶಕ್ತಿ

ಮಾಜಿ ಸಚಿವ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಮಾತನಾಡಿ, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಜನತೆ ಪಾತ್ರ ಪ್ರಮುಖವಾಗಿದೆ. ಸ್ವಾತಂತ್ರೃ ಚಳವಳಿಯಿಂದ ಹಿಡಿದು ತುರ್ತುಪರಿಸ್ಥಿತಿ ವಿರೋಧಿ ಹೋರಾಟ, ರಾಮ ಮಂದಿರ ನಿರ್ಮಾಣದ ಸಂಕಲ್ಪ, ಗೋಹತ್ಯೆ ನಿಷೇಧ ಹೋರಾಟ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಾಟಕ್ಕೆ ಸಂಬಂಧಿಸಿದ ಹೋರಾಟಗಳಲ್ಲಿ ಯುವಕರು ಮುಂಚೂಣಿಯ ಪಾತ್ರ ವಹಿಸಿದ್ದಾರೆ. ಯುವಶಕ್ತಿ ರಾಷ್ಟ್ರದ ಶಕ್ತಿ ಎಂದರು.

ಜಗತ್ತಿನ ಜ್ಞಾನದ ದೇಶ ಭಾರತ. ಜ್ಞಾನದ ಹಂತಗಳನ್ನು ದಾಟಿ ಸೃಷ್ಟಿಯ ಸತ್ಯ ಅರಿಯಬೇಕು. ಶ್ರಮ ಸಂಸ್ಕೃತಿ ನಮ್ಮದಾಗಬೇಕು. ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು. ಯುವಕರು ಸಾಮಾಜಿಕ ಕಳಕಳಿ, ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು. ಸಮಾಜದ ಅಂಕು ಡೊಂಕು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಗೋ ರಕ್ಷಣೆ, ನೀರು ಸಂರಕ್ಷಣೆ, ಪರಿಸರದ ಉಳಿವಿಗೆ ಶ್ರಮಿಸಬೇಕು. ಜಾತಿ, ಮತ ಪಂಥ ತೊರೆದು ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.

ಯುವಕರಿಗೆ ಶಿಕ್ಷಣ, ಸಂಸ್ಕಾರ ನೀಡಬೇಕು. ಶಿಕ್ಷಣ ಎಂದರೆ ಹಣ ಗಳಿಸುವ ಸಾಧನವಲ್ಲ. ವ್ಯಕ್ತಿತ್ವ ಮತ್ತು ವ್ಯವಸ್ಥೆ ಬದಲಿಸುವ ಮಾರ್ಗ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲೂ ಸಾಕಷ್ಟು ಪರಿವರ್ತನೆ ಆಗಬೇಕಿದೆ ಎಂದರು.

ಆಕ್ರಮಣ ಮೆಟ್ಟಿ ನಿಂತ ಸಂಸ್ಕೃತಿ

ಆನೆಗುಂದಿಯ ಮಹಾರಾಜ ಕೃಷ್ಣ ದೇವರಾಯ ಮಾತನಾಡಿ, ಭಾರತೀಯ ಸಂಸ್ಕೃತಿ ಜಗತ್ತಿನ ವಿಶಿಷ್ಟ ಸಂಸ್ಕೃತಿ. ಸಹಸ್ರಾರು ವರ್ಷಗಳ ಆಕ್ರಮಣ ಮೆಟ್ಟಿ ಇಂದಿಗೂ ಬದುಕಿ ಉಳಿದಿದೆ. ವಿಜಯನಗರ ಸಾಮ್ರಾಜ್ಯ ಹಿಂದು ಸಂಸ್ಕೃತಿ ರಕ್ಷಿಸಿದ್ದಲ್ಲದೆ ಅದರ ಬೆಳವಣಿಗೆಗೆ ಶ್ರಮಿಸಿತು. ಜಗತ್ತಿನ ಹಲವು ರಾಷ್ಟ್ರಗಳಿಗೆ ಇಲ್ಲಿನ ಸಂಸ್ಕೃತಿ ಹರಡುವಂತೆ ಮಾಡಿತು. ಆದರೆ ಇಂದಿನ ಯುವ ಜನತೆ ಶ್ರೇಷ್ಠ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರದೃಷ್ಟಕರ. ಪ್ರಜ್ಞಾವಂತರು ನಮ್ಮ ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಾದ ಮಹೋನ್ನತ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ ಎಂದರು.

ಶಾಸ್ತ್ರೀಜಿ ಸ್ಫೂರ್ತಿದಾಯಕ ಭಾಷಣ

ಕಷ್ಟ ಸಹಿಷ್ಣು ಗುಣ, ದೇಶಕ್ಕಾಗಿ ಸಂಘರ್ಷ, ಶ್ರಮ ಯುವಕರ ಮೂಲ ಮಂತ್ರವಾಗಬೇಕು. ಈ ಗುಣಗಳೇ ಯುವಕರಿಗೆ ದಾರಿದೀಪವಾಗಬೇಕೆಂದು ಲಾಲ್ ಬಹಾದ್ದೂರ ಶಾಸೀ ಅವರ ಪುತ್ರ ಸುನೀಲ ಶಾಸ್ತ್ರೀಜಿ ಅಭಿಪ್ರಾಯಿಸಿದರು.

‘ಯುವ ಸಂಗಮ’ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಶಾಸೀಜಿ ಅವರ ಆದರ್ಶಗಳ ಬೆಳಕಿನಲ್ಲಿ ಯುವಜನತೆ ಸಾಗಬೇಕಾದ ಪಥದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.

ಬಡತನದಂಥ ಕಷ್ಟಗಳು ಯುವಕರ ಸಾಧನೆಯ ಅಡ್ಡಗಾಲಲ್ಲ, ಇದನ್ನು ನಕಾರಾತ್ಮಕವಾಗಿ ಸ್ವೀಕರಿಸಬಾರದು. ಮನೆಯಲ್ಲಿ ದೀಪವಿಲ್ಲದ ಪರಿಸ್ಥಿತಿಯಲ್ಲಿ, ಬನಾರಸ್‌ನ ರಾಮನಗರದ ಬೀದಿದೀಪದ ಬೆಳಕಿನಲ್ಲಿ ಓದಿ ಜ್ಞಾನದ ಬೆಳಕನ್ನು ಕಂಡವರು ಶಾಸೀಜಿ. ಇಂತಹ ಶಾಸೀಜಿ ಅವರ ಕಷ್ಟ ಸಹಿಷ್ಣು ಗುಣ ಯುವಕರಿಗೆ ದಿಕ್ಸೂಚಿಯಾಗಿದೆ ಎಂದರು.

ವಿಶಿಷ್ಟಪೂರ್ಣ ಡ್ರೋಣ್ ನಿರ್ಮಿಸಿ ಅಂತಾರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಪ್ರತಾಪ್ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಸಿದ ಸುನೀಲ್ ಶಾಸೀಜಿ, ದೇಶದಲ್ಲಿ ಒಬ್ಬ ಪ್ರತಾಪ್ ಅಲ್ಲ, ಸಹಸ್ರಾರು ಪ್ರತಾಪ್‌ಗಳು ಜನ್ಮತಾಳಬೇಕಿದೆ, ಸಾಧನೆಯ ಶಿಖರವನ್ನು ಮುಟ್ಟಬೇಕಿದೆ, ನೂರಾರು ಚಿನ್ನದ ಪದಕಗಳನ್ನು ಭಾರತದ ಮುಡಿಗೇರಿಸಬೇಕಿದೆ ಎಂದು ಆಶಿಸಿದರು.

ಬಾಲಗಾಂವದ ಅಮೃತನಾಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಭಾರತೀಯ ಸಂಸ್ಕೃತಿ ಉತ್ಸವ ರಾಷ್ಟ್ರೀಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವ ಅಣ್ಣಿಗೇರಿ ಸ್ವಾಗತಿಸಿದರು.

ಸಾಧಕರಿಗೆ ಸನ್ಮಾನ

ಡ್ರೋಣ್ ಸಂಶೋಧಕ ಯುವ ವಿಜ್ಞಾನ ಎಂ.ಎನ್. ಪ್ರತಾಪ್ ಇವರನ್ನು ಯುವ ಸಂಗಮದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಪ್ರತಾಪ ಸಾಧನೆಗೆ ಬಡತನ ಅಡ್ಡಿಯಲ್ಲ. ಯುವಕರು ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಬೇಕೆಂದು ತಮ್ಮ ಯಶೋಗಾಥೆ ವಿವರಿಸಿದರು. ವಿಜಯವಾಣಿ ಅಂಕಣಕಾರ ಡಾ. ಬಾಬು ಕೃಷ್ಣಮೂರ್ತಿ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...