More

    ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಿ

    ವಿಜಯಪುರ : ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಚಾಲಕರು ಸಂಚಾರಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದ ಕಾರಣ ಅಪಘಾತಗಳು ಹೆಚ್ಚುತ್ತಿವೆ ಎಂದು ನಗರ ಸಂಚಾರಿ ಸಹಾಯಕ ಪೊಲೀಸ್ ಸಬ್‌ಇನ್ಸಪೆಕ್ಟರ್ ಎಂ.ಎ. ಹಾದಿಮನಿ ಹೇಳಿದರು.

    ನಗರದ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಶೋಧಾ ಟೊಯೊಟಾ ಪ್ರಾ.ಲಿ. ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಸ್ತೆ ಸಂಚಾರಿ ಸುರಕ್ಷತಾ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸುವುದರ ಜತೆಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವಂತೆ ಜಾಗೃತಿ ಮೂಡಿಸಿದರು.

    ಶೋಧಾ ಟೊಯೊಟಾ ಕಂಪನಿ ಸರ್ವಿಸ್ ಮುಖ್ಯಸ್ಥ ಮಾಲತೇಶ ಕುಲಕರ್ಣಿ ಮಾತನಾಡಿ, ಶೋಧಾ ಟೊಯೊಟಾ ಕಂಪನಿಯೂ ಸಾರ್ವಜನಿಕರ ಸೇವೆಗೆ ಬದ್ಧವಾಗಿದೆ. ಕಂಪನಿಯಿಂದ ಇಂಥ ಸಾಮಾಜಮುಖಿ ಕಾರ್ಯಕ್ರಮಗಳನ್ನು ಆಗಾಗ್ಗೆ ಹಮ್ಮಿಕೊಳ್ಳುವ ಮೂಲಕ ಸಂಚಾರಿ ನಿಮಯಗಳನ್ನು ಪಾಲಿಸುವಂತೆ ಗ್ರಾಹಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

    ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಶನ್ ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿದರು. ಸಂಚಾರಿ ಪೊಲೀಸ್ ಇಲಾಖೆ ಎಸ್.ಪಿ. ಚವಾಣ್, ಶೋಧಾ ಟೊಯೊಟಾ ಕಂಪನಿ ಅಧಿಕಾರಿಗಳಾದ ಸುಧೀರ ಅಂಗಡಿ, ರಾಕೇಶ ಪವಾರ, ಅಲ್ಲಾಭಕ್ಷ ಕಂಚಗಾರ, ಇಸ್ಮಾಯಿಲ್ ಮುಜಾವರ್, ಸಾಜೀದ್ ಜಮಾದಾರ್, ಫಿರಾಜ್ ಜಮಾದಾರ್, ಇಂದ್ರಜಿತ ಹುಯಿಲಗೋಳ, ಪ್ರಶಾಂತ ಡೊಂಬರ, ನಾಗರಾಜ ಮಡಿವಾಳರ, ಶರಣಬಸಪ್ಪ ದೇವರನಾದವಗಿ, ಬಸು ಹುಂಡೇಕಾರ, ಅಶೋಕ ನರಗುಂದ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts