ಪ್ರಾಣಿ ಬಲಿ ನಿಷೇಧ ಕಾಯ್ದೆ ಪಾಲನೆಯಾಗಲಿ

ವಿಜಯಪುರ: ಗೋವುಗಳ ಹತ್ಯೆ, ಶೇಖರಣೆ, ಅಕ್ರಮ ಸಾಗಾಣಿಕೆ ಹಾಗೂ ಗೋವುಗಳ ಕಳ್ಳತನ ಪ್ರಕರಣ ತಡೆಯಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಗೋ ಪ್ರಕೋಷ್ಠ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಗೋ ಪ್ರಕೋಷ್ಠ ಸಹ ಸಂಚಾಲಕ ವಿಜಯ ಜೋಶಿ ಮಾತನಾಡಿ, ಬಿಜೆಪಿ ಗೋ ಸಂರಕ್ಷಣಾ ಜಿಲ್ಲಾ ಘಟಕವು ಗೋವುಗಳ ರಕ್ಷಣೆಗೆ ಇರುವ ಕಾನೂನು ಅನುಷ್ಠಾನಗೊಳಿಸುವ ಕಾರ್ಯ ಮಾಡಿಕೊಂಡು ಬಂದಿದೆ. ಕರ್ನಾಟಕದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಕರ್ನಾಟಕ ಬಲಿ ನಿಷೇಧ ಕಾಯ್ದೆ 1959ರಲ್ಲಿ ಜಾರಿಯಲ್ಲಿದೆ. 1959ರಲ್ಲಿ ಇದು ಹಿಂದೂಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ 1975ರಲ್ಲಿ ಅದನ್ನು ಎಲ್ಲಾ ಧರ್ಮದವರಿಗೆ ಅನ್ವಯವಾಗುವಂತೆ ತಿದ್ದುಪಡಿ ಮಾಡಿರುವುದರಿಂದ ಬಕ್ರೀದ್‌ಗೆ ಕುರ್ಬಾನಿ ಕೊಡುವುದಕ್ಕೂ ಅನ್ವಯವಾಗುತ್ತದೆ. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಗೋವುಗಳ ಹತ್ಯೆ, ಶೇಕರಣೆ, ಅಕ್ರಮ ಸಾಗಾಣಿಕೆ ಹಾಗೂ ಗೋವುಗಳ ಕಳ್ಳತನ ಆಗದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಗೋ ಪ್ರಕೋಷ್ಠ ಸಹ ಸಂಚಾಲಕ ವಿನಾಯಕ ದಹಿಂಡೆ ಮಾತನಾಡಿ, ಬಕ್ರೀದ್ ಹಬ್ಬದಲ್ಲಿ ಗೋವುಗಳು ಹಾಗೂ ಒಂಟೆಗಳನ್ನು ಹತ್ಯೆ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಭಿಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ನೀಲಕಂಠ ಕಂದಗಲ್, ಕೃಷ್ಣಾ ಗುನ್ಹಾಳಕರ, ಗುರುರಾಜ ದೇಶಪಾಂಡೆ, ರಾಜೇಶ ತಾವಸೆ, ಸತೀಶ ಡೋಬಳೆ, ರಾಜೇಂದ್ರ ವಾಲಿ, ಬಸಯ್ಯ ಗೋಳಸಂಗಿಮಠ, ಪ್ರಶಾಂತ ಅಗಸರ, ರಾಮಚಂದ್ರ ಕುಲಕರ್ಣಿ, ಸಿದ್ದು ಮಲ್ಲಿಕಾರ್ಜುನಮಠ, ವಾರಿಸ ಕುಲಕರ್ಣಿ, ಮುರಗೇಶ ಮಠಪತಿ, ಪ್ರಕಾಶ ಪಾಂಡೆ, ರಾಕೇಶ ಕುಲಕರ್ಣಿ, ಮೋಹನ ತಾಟೆ ಇತರರಿದ್ದರು.