ಖಾಸಗಿ ಶಾಲೆ ಶಿಕ್ಷಕರ ಸಂಘದಿಂದ ಧರಣಿ

ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನಿಯಮಬಾಹಿರವಾಗಿ ಲೆಕ್ಕ ಅಧೀಕ್ಷಕರಿಗೆ ವಹಿಸಿದ ಪತ್ರಾಂಕಿತ ಸಹಾಯಕ ಹುದ್ದೆಯ ಪ್ರಭಾರವನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲೆ ಶಿಕ್ಷಕರ ಸಂಘದಿಂದ ಸೋಮವಾರ ಧರಣಿ ಪ್ರಾರಂಭಿಸಲಾಯಿತು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮುಂದೆ ಧರಣಿ ಆರಂಭಿಸಿದ ಸಂಘದ ಸದಸ್ಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಪತ್ರಾಂಕಿತ ಸಹಾಯಕರ ಹುದ್ದೆಯ ಪ್ರಭಾರವನ್ನು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿನ ಪತ್ರಾಂಕಿತ ವ್ಯವಸ್ಥಾಪಕರುಗಳಲ್ಲಿ ಒಬ್ಬರನ್ನು ಅಥವಾ ಉಪನಿರ್ದೇಶಕರ ಕಚೇರಿಯಲ್ಲಿನ ಹಿರಿಯ ಅಧೀಕ್ಷಕರಿಗೆ ಪ್ರಭಾರ ವಹಿಸಲು ನಿಯಮದಲ್ಲಿ ಅವಕಾಶವಿದೆ. ಆದರೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ಕಚೇರಿಯ ಲೆಕ್ಕ ಅಧೀಕ್ಷಕರಿಗೆ ಪತ್ರಾಂಕಿತ ಸಹಾಯಕ ಹುದ್ದೆಯ ಪ್ರಭಾರ ವಹಿಸಿ ನಿಯಮಗಳನ್ನು ಉಲ್ಲಂಸಿದ್ದಾರೆ. ಈ ಕೂಡಲೇ ಪ್ರಭಾರ ರದ್ದು ಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೌರವಾಧ್ಯಕ್ಷ ಜೆ.ಡಿ. ಚೌಧರಿ, ಅಧ್ಯಕ್ಷ ಅರವಿಂದ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರಭು ಅಳ್ಳಗಿ, ರೌ ಅಥಣಿ, ತೌಸಿ ಮೌಲಾನಾ, ಆರ್.ಎಂ. ಅವಟಿ, ಎಂ.ಎನ್. ಇನಾಮದಾರ, ಎಸ್.ಎನ್. ಸ್ಥಾವರಮಠ, ಡಿ.ಎಸ್.ದಶವಂತ, ಎಸ್.ಎಂ. ಭೂಯ್ಯರ, ಎ್.ಎಂ. ಹಳದಿಮಠ ಇತರರಿದ್ದರು.

Leave a Reply

Your email address will not be published. Required fields are marked *