ಅತ್ಯಾಚಾರಿಗಳಿಗೆ ಶಿಕ್ಷೆಗೆ ಗುರಿಪಡಿಸಲು ಆಗ್ರಹ

ವಿಜಯಪುರ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರಗೆ ಮನವಿ ಸಲ್ಲಿಸಲಾಯಿತು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೈಗಾರಿಕೆ ಪ್ರದೇಶದ ಜನಿತ ಟೈಕ್ಸಟೈಲ್ ಕಾರ್ಖಾನೆ ಬಳಿ ಉಪ್ಪಾರ ಸಮಾಜದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಲಾಗಿದೆ. ನ.16 ರಂದು ಈ ಘಟನೆ ನಡೆದಿದೆ. ಕಾಮ ಪಿಶಾಚಿಗಳ ಈ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸಬಾರದೆಂದರೆ ಆರೋಪಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಜಕ್ಕಪ್ಪ ಸು. ಎಡವೆ, ಸಿದ್ದು ಸಿ. ಗೇರಡೆ, ಡಿಎಸ್​ಎಸ್ ಅಧ್ಯಕ್ಷ ಅಡಿವೆಪ್ಪ ಸಾಲಗಲ್, ಮಹಾನಂದ ಉಪ್ಪಾರ, ಸಿದರಾಮ ಗುಗ್ಗರಿ, ಮಂಜುನಾಥ ನರಳಿ, ಮಲ್ಲಪ್ಪ ರಾಣಗಟ್ಟಿ, ಯಲ್ಲಪ್ಪ ಬಂಡಿ, ಸಿದ್ದು ಉಪ್ಪಾರ, ಮಲ್ಲು ಪಾಟೀಲ, ಶ್ರೀನಿವಾಸ ಅಂಬಲಿ, ವೀರಬಸಯ್ಯಾ ಮಠಪತಿ, ಜೆ.ಎಲ್. ಕಸ್ತೂರಿ ಇತರರು ಇದ್ದರು.

Leave a Reply

Your email address will not be published. Required fields are marked *