ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ

ವಿಜಯಪುರ: ಸ್ಥಳೀಯ ಆದರ್ಶನಗರದ ಆಶ್ರಮ ರಸ್ಥೆಯಲ್ಲಿ ಬುಧವಾರ ಡಿಸಿಸಿ ಬ್ಯಾಂಕ್​ನ ನೂತನ ಶಾಖೆಯನ್ನು ಬ್ಯಾಂಕ್ ಅಧ್ಯಕ್ಷರೂ ಆದ ಸಚಿವ ಶಿವಾನಂದ ಪಾಟೀಲ ಪಾಸ್​ಬುಕ್ ವಿತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಿವಾನಂದ ಪಾಟೀಲ, ಸಹಕಾರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಪ್ರಮುಖ ಪಾತ್ರವಹಿಸಿದ್ದು, ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಕಾಣುತ್ತಿದೆ. ಜಿಲ್ಲೆ ರೈತ ಬಾಂಧವರು ಬ್ಯಾಂಕ್​ನ ಸಹಾಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಆರ್.ಬಿ. ಗುಡದಿನ್ನಿ, ನಿರ್ದೇಶಕ ಗುರುಶಾಂತ ಎಸ್.ನಿಡೋಣಿ, ಸಂಯುಕ್ತ ಶಿವಾನಂದ ಪಾಟೀಲ, ಅಣ್ಣಪ್ಪ ಪೂಜಾರಿ, ಕಲ್ಲನಗೌಡ ಬಿ.ಪಾಟೀಲ, ಸೋಮನಗೌಡ ಬಿರಾದಾರ (ಕವಡಿಮಟ್ಟಿ), ಸಿದ್ಧೇಶ್ವರ ಬ್ಯಾಂಕ್ ಅಧ್ಯಕ್ಷ ಹರ್ಷಗೌಡ ಎಸ್.ಪಾಟೀಲ, ನಿರ್ದೇಶಕ ಆರ್.ಎಂ. ಪಾಟೀಲ, ಡಿಸಿಸಿ ಬ್ಯಾಂಕ್​ನ ಹಿಂದಿನ ನಿರ್ದೇಶಕ ಎಂ.ಆರ್. ಪಾಟೀಲ (ಬಳ್ಳೊಳ್ಳಿ), ಬೀರಪ್ಪ ಜುಮನಾಳ, ಎಸ್.ಎಸ್. ಶಿಂದೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ರಾಜಣ್ಣ ಇತರರಿದ್ದರು.

ಶಾಖೆಯ ವ್ಯವಸ್ಥಾಪಕ ಸಂತೋಷ ಎಂ. ತುರಕನಕೇರಿ ಕಾರ್ಯಕ್ರಮ ನಿರ್ವಹಿಸಿದರು. ಒಂದೇ ದಿನದಲ್ಲಿ ಅಂದಾಜು 4 ಕೋಟಿ ರೂ.ಠೇವಣಿ ಸಂಗ್ರಹಗೊಂಡಿತು. ಬ್ಯಾಂಕ್ ವಸೂಲಾಧಿಕಾರಿ ರಾಜು ಖಸಬೇಗೌಡ, ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ, ನಿವೃತ್ತ ಹಿರಿಯ ಅಧಿಕಾರಿ ಆರ್.ಎಂ. ಬಣಗಾರ ಸೇರಿದಂತೆ ಇತರರು ಠೇವಣಿ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರವಹಿಸಿದರು.