ಗಮನ ಸೆಳೆದ ದೇಹದಾರ್ಢ್ಯ ಸ್ಪರ್ಧೆ

> ರಾಜ್ಯದ ವಿವಿಧ ಭಾಗಗಳ ಬಾಡಿ ಬಿಲ್ಡರ್‌ಗಳ ಆಗಮನ >>

ವಿಜಯಪುರ: ಇಲ್ಲಿನ ದರಬಾರ ಹೈಸ್ಕೂಲ್ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಭಾನುವಾರ ವಿಧ್ಯುಕ್ತ ಚಾಲನೆ ದೊರಕಿತು.

ಕರ್ನಾಟಕ ಅಸೋಸಿಯೇಷನ್ ಆ್ ಬಾಡಿ ಬಿಲ್ಡರ್ಸ್ ಹಾಗೂ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ನಡೆದ ಗೋಲಗುಂಬಜ್ ಕ್ಲಾಸಿಕ್-2019 ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್‌ಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಹಾನಗರಗಳಿಗೆ ಸೀಮಿತವಾಗಿದ್ದ ದೇಹದಾರ್ಢ್ಯ ಸ್ಪರ್ಧೆಯನ್ನು ವಿಜಯಪುರದಲ್ಲಿ ಆಯೋಜಿಸಿರುವುದು ಸಂತಸದ ವಿಷಯ. ಈ ಸ್ಪರ್ಧೆಯಿಂದ ಯುವಜನತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ಸ್ಫೂರ್ತಿ ದೊರಕಿದೆ. ದೇಹದಾರ್ಢ್ಯದಲ್ಲಿ ಹೆಸರು ಮಾಡಿರುವ ಸಾಧಕರನ್ನು ನೋಡುವ ಅಪೂರ್ವ ಅವಕಾಶ ದೊರಕಿದಂತಾಗಿದೆ ಎಂದರು.

ಪಾಲಿಕೆ ಉಪ ಮೇಯರ್ ಗೋಪಾಲ ಘಟಕಾಂಬಳೆ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರ್ೀ, ಮಾಜಿ ಶಾಸಕ ಮನೋಹರ್ ಐನಾಪುರ, ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ರಫೀಕ್ ಟಪಾಲ, ಪಾಲಿಕೆ ಸದಸ್ಯರಾದ ಅಲ್ತಾಫ್ ಇಟ್ಟಗಿ, ಮೈನೂದ್ದೀನ್ ಬೀಳಗಿ, ಪ್ರಕಾಶ ಮಿರ್ಜಿ, ಸಜ್ಜಾದೆಪೀರಾ ಮುಶ್ರ್ೀ, ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಅಧ್ಯಕ್ಷ ಎ.ಎಸ್ ಪಟೇಲ, ಉಪಾಧ್ಯಕ್ಷ ಸಂಜು ದಾಸರ, ಕಾರ್ಯದರ್ಶಿ ಶಹಾನೂರಅಲಿ ಉಸ್ತಾದ, ಜಂಟಿ ಕಾರ್ಯದರ್ಶಿ ಗೌಸ ಟಾಕಳಿ, ಖಜಾಂಚಿ ಜಹಿರ ಬೇಪಾರಿ, ಯಾಜ್ ತಿಕೋಟಿಕರ, ಸುರೇಶ ಬಿಜಾಪುರ ಸೇರಿ ಮುಂತಾದವರು ಇದ್ದರು.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ 96, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 30 ಸ್ಪರ್ಧಿಗಳು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು.