Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯಾಗಲಿ

Saturday, 10.02.2018, 5:35 PM       No Comments

<<ಪಣತೊಡಲು ದಲಿತರಿಗೆ ಪ್ರಕಾಶ್ ಅಂಬೇಡ್ಕರ್ ಸಲಹೆ>>

ವಿಜಯಪುರ: ಸರ್ಕಾರಗಳ ನಿರ್ಲಕ್ಷ್ಯಂದಾಗಿ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳಿಗೆ ತಡೆ ಇಲ್ಲದಂತಾಗಿದೆ. ರಾಜಕೀಯ ಕ್ಷೇತ್ರದಲ್ಲಿ ದಲಿತರನ್ನು ನಿರ್ಲಕ್ಷಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ದಲಿತರು ಒಗ್ಗಟ್ಟು ಪ್ರದರ್ಶಿಸಿ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಉದಯಕ್ಕೆ ಪಣತೊಡಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದರು.

ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್​ವಾದ) ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಡೆದ ‘ಸಂವಿಧಾನ ಪಡಾವೋ ದೇಶ್ ಬಚಾವೋ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿಯೇ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬಹುದಿತ್ತು. ಆದರೆ, ಕೈತಪ್ಪಿದ್ದರಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈ ಬಾರಿಯೂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಮತ್ತೆ ಅದಕ್ಕೆ ಅವಕಾಶ ಕೊಡದೆ ದಲಿತರಿಗೆ ಮನ್ನಣೆ ನೀಡುವಂತೆ ಸಭಿಕರಲ್ಲಿ ಮನವಿ ಮಾಡಿದರು.

ಸಂವಿಧಾನ ಬದಲಿಸುವ ಹುನ್ನಾರ

ವಿಶ್ವದಲ್ಲೆ ಶ್ರೇಷ್ಠ ಸಂವಿಧಾನ ನಮ್ಮ ದೇಶಕ್ಕೆ ಸಿಕ್ಕಿದ್ದು, ಅದನ್ನು ಬದಲಿಸುವ ಹುನ್ನಾರವನ್ನು ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಡೆಯುತ್ತಿದೆ ಎಂದು ಪ್ರಕಾಶ್ ಅಂಬೇಡ್ಕರ್ ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಇನ್ನು ಮನು ಸಂಸ್ಕೃತಿ ಇದೆ. ಇದರಿಂದಾಗಿ ಕೋಮು ಗಲಭೆ, ಜಾತಿಯತೆ ಇನ್ನು ಬಲಾಢ್ಯಗೊಳ್ಳುತ್ತಿದೆ. ಬಿಜೆಪಿ ಹಾಗೂ ಸಂಘ ಪರಿವಾರ ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಸುತ್ತಿದೆ. ಅಂಬೇಡ್ಕರ್ ಅವರು ಕಂಡ ಜಾತ್ಯತೀತ ರಾಷ್ಟ್ರ ನಿರ್ಮಾಣ ಇನ್ನು ಕನಸಾಗಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನದ ಬಲದಿಂದಲೇ ನಾವು ಸ್ವಾಭಿಮಾನಿಗಳಾಗಬೇಕು. ಆ ಮೂಲಕ ನಮಗೆ ದಕ್ಕಿರುವ ಹಕ್ಕುಗಳನ್ನು ಹೋರಾಟದಿಂದ ಪಡೆಯಬೇಕಿದೆ. ಮೇಲ್ಜಾತಿಯ ರಾಜಕೀಯ ನಾಯಕರು ನೀಡುವ ಹಣ, ಹೆಂಡಕ್ಕೆ ಮಾರು ಹೋಗದೆ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕಿದೆ. ಭಾರತೀಯ ಸಂವಿಧಾನವನ್ನು ಕೇವಲ ದಲಿತರೇ ರಕ್ಷಣೆ ಮಾಡುವುದಲ್ಲ. ಅದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಧ್ಯೇಯವಾಗಬೇಕು ಎಂದು ತಿಳಿಸಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಅವಶ್ಯ

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮಹಾರಾಷ್ಟ್ರ, ಕರ್ನಾಟಕದಲ್ಲಿ ವ್ಯಾಪಕ ಹೋರಾಟ ನಡೆಯುತ್ತಿದೆ. ಆದರೆ ಲಿಂಗಾಯತರ ಏಳಿಗೆಗೆ ಇಲ್ಲಿನ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತ್ಯೇಕ ಮಾನ್ಯತೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆ ನಿಟ್ಟಿನಲ್ಲಿ ಲಿಂಗಾಯತರು ತಮ್ಮ ಹಕ್ಕನ್ನು ನೀಡುವಂತೆ ಪ್ರತಿಪಾದಿಸುತ್ತಿದ್ದಾರೆ. ಮಾನ್ಯತೆ ನೀಡುವುದರಿಂದ ಹಿಂದು ಧರ್ಮಕ್ಕೆ ಧಕ್ಕೆಯಾಗದು. ಹಿಂದುಗಳಿಂದ ಲಿಂಗಾಯತರು ಬೇರ್ಪಟ್ಟರೆ ಸಂಖ್ಯಾಬಲ ಕುಸಿಯಲಿದೆ ಎನ್ನುವ ಆತಂಕ ಬಿಜೆಪಿಗರಲ್ಲಿದೆ ಎಂದು ಪ್ರಕಾಶ ಅಂಬೇಡ್ಕರ್ ವಿಶ್ಲೇಷಿಸಿದರು.

ಮುಖಂಡರಾದ ಫಾ.ಜೆರಾಲ್ಡ್ ಡಿಸೋಜಾ, ಮೋಹನರಾಜ್, ಪರಶುರಾಮ ನೀಲನಾಯಕ, ಬಸವರಾಜ ಕೌತಾಳ, ಶಾಸ್ತ್ರೀ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top