ವಿಜಯಪುರ: ಕರೊನಾ ಶಂಕಿತ 69 ವರ್ಷದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಸಾವಿಗೀಡಾಗಿದ್ದಾರೆ.
ಮೃತ ವೃದ್ಧನ ಪತ್ನಿಗೆ ಇಂದು ಬೆಳಗ್ಗೆ ಕರೊನಾ ಪಾಸಿಟಿವ್ ವರದಿ ಬಂದಿತ್ತು. ಆದರೆ, ವೃದ್ಧನ ವರದಿ ಇನ್ನೂ ಬಂದಿರಲಿಲ್ಲ. ಕರೊನಾ ಲಕ್ಷಣಗಳ ಶಂಕೆ ಕಂಡುಬಂದ ಹಿನ್ನೆಲೆಯಲ್ಲಿ ಶಂಕಿತ ಪ್ರಕರಣ ಎಂದು ಪರಿಗಣಿಸಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಇದೀಗ ವೃದ್ಧ ಸಾವಿಗೀಡಾಗಿದ್ದು, ಆತನ ಪರಿಕ್ಷಾ ವರದಿಗೆ ವಿಜಯಪುರ ಜಿಲ್ಲಾಡಳಿತ ಕಾಯುತ್ತಿದೆ. ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)
ಒಂದು ಲೋಡ್ ಹೂ ತೆಗೆದುಕೊಂಡು ಹೋಗಿ ಸಿಎಂ ಬಿಎಸ್ವೈಗೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚಿಸಿದ್ದೇಕೆ?