ರಾಜೀವ ಗಾಂಧಿ ಪುಣ್ಯತಿಥಿ ಆಚರಣೆ

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪುಣ್ಯತಿಥಿ ಆಚರಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ರಾಜೀವ ಗಾಂಧಿಯವರು ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವತ್ತ ದೂರಸಂಪರ್ಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ನಾಯಕ ಎಂದು ಹೇಳಿದರು.
ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಡಿ.ಎಚ್. ಕಲಾಲ ಮಾತನಾಡಿದರು.
ಪಕ್ಷದ ಮುಖಂಡ ಅಜೀತ್‌ಸಿಂಗ್ ಪರದೇಶಿ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷ ಆರತಿ ಶಹಾಪುರ, ರ್ಇಾನ್ ಶೇಖ, ಸಾಹೇಬಗೌಡ ಬಿರಾದಾರ, ಮಹ್ಮದ್ ಹನೀಫ್ ಮಕಾನದಾರ್, ಶಬ್ಬೀರ್ ಜಾಗೀರದಾರ್, ವಸಂತ ಹೊನಮೊಡೆ, ಚನ್ನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ದಾವಲಸಾಬ ಬಾಗವಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *