20.5 C
Bangalore
Sunday, December 15, 2019

ದುಷ್ಕರ್ಮಿಗಳ ಬಂಧನಕ್ಕೆ ಬ್ರಾಹ್ಮಣರ ಆಗ್ರಹ

Latest News

ಆನೆ ದಾಳಿಗೆ ಬೆಳೆಗಾರ ಕಂಗಾಲು

ಚಿಕ್ಕಮಗಳೂರು: ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಮಿತಿಮೀರಿದೆ. ಇವುಗಳಿಂದ ಬೆಳೆಯನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ...

ಅಡುಗೆಗೆ ಗುಣಮಟ್ಟದ ಪದಾರ್ಥ ಬಳಸಿ

ಕೊಪ್ಪ: ಅಡುಗೆ ಮಾಡುವಾಗ ಸ್ವಚ್ಛತೆಗೆ ಗಮನ ಹರಿಸಬೇಕು. ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿ. ಹೆಚ್ಚು ಜವಾಬ್ದಾರಿಯಿಂದ ಅಡುಗೆ ಮಾಡಬೇಕು ಎಂದು ಅಕ್ಷರ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಮಾಯಣ, ಮಹಾಭಾರತ, ಭಾಗವತಗಳೇ ಮೂಲಾಧಾರ: ಶ್ರೀ ರಾಘವೇಶ್ವರ ಸ್ವಾಮೀಜಿ

ಬೆಂಗಳೂರು: ರಾಮಾಯಣ ಮಹಾಕಾವ್ಯ ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ ಹಾಗೂ ಭಾಗವತ ನಮ್ಮ ಭರತ ಸಂಸ್ಕೃತಿಯ ಮೂಲಾಧಾರ. ಈ ಮೂರನ್ನು ಮೂಲವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ...

ರೇವಣ್ಣರಿಂದ ಕಲಿಯುವುದು ಮುಗಿದಿದೆ

ಹಾಸನ ಜಿಲ್ಲೆಯನ್ನಷ್ಟೇ ನೋಡಿಕೊಳ್ಳಲಿ ಶಾಸಕ ಕೆ.ಸಿ.ನಾರಾಯಣಗೌಡ ವಾಗ್ದಾಳಿ ಕೆ.ಆರ್.ಪೇಟೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ನಮ್ಮ ಜಿಲ್ಲೆ, ತಾಲೂಕು ನೋಡುವ ಅವಶ್ಯಕತೆ ಇಲ್ಲ. ಹಾಸನ ಜಿಲ್ಲೆಯನ್ನಷ್ಟೇ...

ಜೆಡಿಎಸ್‌ಗೆ ನಾರಾಯಣಗೌಡ ಯಾವ ಲೆಕ್ಕ!

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ಪಾಂಡವಪುರ: ಮಾಜಿ ಪ್ರಧಾನಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿ ಎಚ್ಚರಿಕೆ ನೀಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ...

ವಿಜಯಪುರ: ಆನೆಗುಂದಿಯ ಶ್ರೀ ವ್ಯಾಸರಾಜತೀರ್ಥರ ಮೂಲ ವೃಂದಾವನ ಧ್ವಂಸ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಉಗ್ರ ಕ್ರಮ ಕೈಗೊಳ್ಳಲು ಆಗ್ರಹಿಸಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮುದಾಯ ಬಾಂಧವರು ಕುಕೃತ್ಯ ಖಂಡಿಸಿ ಘೋಷಣೆ ಕೂಗಿದರು. ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ಪಂಡಿತ ಮಧ್ವಾಚಾರ್ಯ ಮೊಖಾಸಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಹಂಪೆಯ ಕೃಷ್ಣದೇವರಾಯನ ರಾಜಗುರುಗಳಾದ ಶ್ರೀ ವ್ಯಾಸರಾಜತೀರ್ಥರ ವೃಂದಾವನವು ಧ್ವಂಸವಾದ ವಾರ್ತೆ ಸಮಸ್ತ ಹಿಂದೂಗಳಿಗೆ, ಬ್ರಾಹ್ಮಣರಿಗೆ ಅತ್ಯಂತ ಖೇದಕರ ಸಂಗತಿ. ಘಟನೆ ದಿನ ಸಮಗ್ರ ಕರ್ನಾಟಕಕ್ಕೆ ಕರಾಳವಾದದ್ದು. ವ್ಯಾಸರಾಜತೀರ್ಥರು ಅಗಾಧವಾದ ಪಾಂಡಿತ್ಯ ಉಳ್ಳವರಾಗಿದ್ದರು. ಅವರು ಸ್ವತ: ಕನ್ನಡದ ದಾಸ ಸಾಹಿತ್ಯದ ಕೀರ್ತನೆಗಳನ್ನು ರಚಿಸಿರುವುದಲ್ಲದೇ, ಪುರಂದರದಾಸರ ಮತ್ತು ಕನಕದಾಸರ ಗುರುಗಳಾಗಿ ಕನ್ನಡ ದಾಸ ಸಾಹಿತ್ಯದ ವ್ಮಾಯವನ್ನು ನಾಡಿನ ಸಕಲರಿಗೂ ಉಣಬಡಿಸಿದವರು. ಮಾಧ್ವರಿಗೆ ಪರಮ ಪೂಜನೀಯರಾದ ವೈರಾಗ್ಯ ಶಿಖಾಮಣಿಗಳಾದ ಶ್ರೀ ವ್ಯಾಸರಾಜತೀರ್ಥರ ವೃಂದಾವನವನ್ನು ನಿಧಿಗಾಗಿ ಅಗೆದು ಹಾಳುಮಾಡಿದ ವಿಧ್ವಂಸಕರನ್ನು ಕೊಪ್ಪಳ ಜಿಲ್ಲಾಡಳಿತವು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸಿ ಶಿಕ್ಷಿಸಲು ಆಗ್ರಹಿಸುವುದಾಗಿ ತಿಳಿಸಿದರು.
ಅದರಂತೆ ಆ ಮಹಾಪುಣ್ಯ ಕ್ಷೇತ್ರವಾದ ನವವೃಂದಾವನದಲ್ಲಿ ಒಟ್ಟು ಒಂಬತ್ತು ಮಹಾನ್ ಯತಿಗಳ ವೃಂದಾವನಗಳಿವೆ. ಈ ದುರ್ಘಟನೆಯಿಂದ ಸಮಸ್ತ ಬ್ರಾಹ್ಮಣರಿಗೆ ಪೂಜನೀಯರಾದ ಯತಿವರೇಣ್ಯರ ವೃಂದಾವನಗಳಿಗೆ ಯಾವುದೇ ರೀತಿಯಿಂದ ಇನ್ನು ಮುಂದೆ ಇಂಥ ಘಟನೆ ಮರುಕಳಿಸಬಾರದೆಂದು ಸರ್ಕಾರ ಕೂಡಲೆ ಸಂಬಂಧಿಸಿದ ಆ ನವವೃಂದಾವನದ ಆಸ್ತಿಯ ಮಾಲೀಕತ್ವ ಹೊಂದಿದವರಿಗೆ ಸೂಚಿಸಬೇಕೆಂದರು.
ಪಂ. ಸಂಜೀವಾಚಾರ್ಯ ಮದಭಾವಿ, ಪಂ. ವೇದನಿಧಿ ಆಚಾರ್ಯ ಕುಲಕರ್ಣಿ, ಪಂ. ಅಜೀತಾಚಾರ್ಯ ಹನಗಂಡಿ, ಪಂ. ಕಶ್ಯಪಾಚಾರ್ಯ ಗೊರನಾಳ, ಕೃಷ್ಣಕೋಲ್ಹಾರ ಕುಲಕರ್ಣಿ, ಆನಂದ ಜೋಶಿ, ಶ್ರೀನಿವಾಸ ಬೆಟಗೇರಿ, ಗೋವಿಂದರಾಜ ದೇಶಪಾಂಡೆ, ಮಹೇಶ ದೇಶಪಾಂಡೆ, ವಿನಾಯಕ ಕುಲಕರ್ಣಿ, ಶ್ರೀಹರಿ ಗೊಳಸಂಗಿ, ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ಅನಂತ ದೇಶಪಾಂಡೆ, ಸಮೀರ ಕುಲಕರ್ಣಿ, ರಾಜೇಂದ್ರ ಜೋಶಿ ಇತರರಿದ್ದರು.
ಶ್ರೀ ಉತ್ತರಾದಿ ಮಠ, ರಾಘವೇಂದ್ರ ಸ್ವಾಮಿಗಳ ಮಠ, ದಿವಟಗೇರಿ ರಾಯರ ಮಠ, ಶ್ರೀಕೃಷ್ಣ ಮಠ, ಶಂಕರ ಮಠ, ವಿಶ್ವಮಾಧ್ವ ಮಹಾಪರಿಷತ್, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ಅಖಿಲ ಭಾರತ ಮಾಧ್ವ ಮಹಾಮಂಡಳ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು.

Stay connected

278,756FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...