ಬಾಲಕನಿಗೆ ಬೀಯರ್ ಬಾಟಲ್​ನಿಂದ ಇರಿತ

ವಿಜಯಪುರ: 8 ವರ್ಷದ ಬಾಲಕನನ್ನು ಬೀಯರ್ ಬಾಟಲ್​ನ ಒಡೆದ ಚೂರಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಗರ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ನಾಗರಬಾವಡಿ ನಿವಾಸಿ ಇಫಾನ್ ಶೇಖ (8) ಎಂಬಾತ ಇರಿತಕ್ಕೊಳಗಾದ ಬಾಲಕ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಬೀಯರ್ ಬಾಟಲ್ ಒಡೆದು ಅದರ ಚೂಪಾದ ಮೊನೆಯಿಂದ ಬಾಲಕನಿಗೆ ಇರಿದಿದ್ದಾನೆ. ಇದನ್ನು ಕಂಡ ಹತ್ತಿರದ ತೋಟದ ವಸ್ತಿಯ ನಿವಾಸಿ ಓಡಿ ಬಂದು ಬಾಲಕನನ್ನು ರಕ್ಷಿಸಿದ್ದಾನೆ. ಗಾಯಾಳು ಬಾಲಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಈ ಬಗ್ಗೆ ಇನ್ನೂ ಪ್ರಕರಣ ದಾಖಲಾಗಿಲ್ಲ.