ಡಾ.ಮುಖರ್ಜಿಯವರ ತತ್ತ್ವಾದರ್ಶ ಪಾಲಿಸಿ

ವಿಜಯಪುರ: ದೇಶದಲ್ಲಿಂದು ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬರಲು ಡಾ.ಮುಖರ್ಜಿಯವರ ಶ್ರಮ ಹಾಗೂ ಬಲಿದಾನವೇ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಹೇಳಿದರು.
ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಮುಖರ್ಜಿಯವರು ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಹಾಗೂ ದೇಶದ ಪ್ರಗತಿ ಬಗ್ಗೆ ಚಿಂತನೆ ಹೊಂದಿದ್ದರು. ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅವರಿಗೆ ಪರ್ಯಾಯ ನಾಯಕರಾಗಿದ್ದ ಅವರ ಅನುಮಾನಾಸ್ಪದ ಸಾವಿಗೆ ತನಿಖೆ ನಡೆಸಲು ಯಾರೂ ಮುಂದಾಗಲಿಲ್ಲ ಎಂದು ಹೇಳಿದರು.
ಪಕ್ಷದ ಬೆಳಗಾವಿ ಪ್ರಮುಖ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್.ಎಸ್. ಪಾಟೀಲ, ರವಿಕಾಂತ ಬಗಲಿ, ಸಂಗರಾಜ ದೇಸಾಯಿ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಭೀಮಾಶಂಕರ ಹದನೂರ, ವಿಜಯ ಜೋಶಿ, ರಾಹುಲ್ ಜಾಧವ, ಕಾಂತು ಶಿಂಧೆ, ಸತೀಶ ಡೋಬಳೆ, ಮಲ್ಲಮ್ಮ ಜೋಗೂರ, ರವಿ ಬಿರಾದಾರ, ಉಮೇಶ ಅಡಕಿ, ಗಣೇಶ ಇಜೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *