ಲಾರಿ-ಬೈಕ್ ಅಪಘಾತ ವ್ಯಕ್ತಿ ಸಾವು

ವಿಜಯಪುರ: ನಗರದ ಸ್ಟೇಷನ್ ಬ್ಯಾಕ್ ರಸ್ತೆಯಲ್ಲಿ ಮಹಾರಾಷ್ಟ್ರ ಮೂಲಕ ವಾಹನ ಚಾಲಕ ಸುನೀಲ ಗಾಯಕವಾಡ ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡಿಸಿದ್ದರಿಂದ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಶಿಕಾರಖಾನಾ ಬಡಾವಣೆಯ ಸಂತೋಷ ಇಂಗಳೇಶ್ವರ (29) ಮೃತ ದುರ್ದೈವಿ. ಸೋಮವಾರ ಲಾರಿ ಚಾಲಕ ಬೈಕ್​ಗೆ ಗುದ್ದಿದ್ದರಿಂದ ಬೈಕ್ ಹಿಂದೆ ಕುಳಿತಿದ್ದ ಸಂತೋಷ ಎಂಬುವವರಿಗೆ ತೀವ್ರ ಗಾಯಗಳಾಗಿದ್ದವು. ಅವರನ್ನು ನಗರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಂತೋಷ ಸೋಮವಾರ ಸಂಜೆ ಮೃತಪಟ್ಟಿದ್ದು, ಬೈಕ್ ಸವಾರ ರಾಜು ವಠಾರ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಶುರಾಮ ಇಂಗಳೇಶ್ವರ ನೀಡಿದ ದೂರಿನ ಮೇರೆಗೆ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.