ಯೋಗ ಬದುಕಿನ ಉತ್ತಮ ಕಲೆ

ವಿಜಯಪುರ: ಆರೋಗ್ಯಯುತ ಬದುಕಿಗೆ ದುಡ್ಡು ಮುಖ್ಯವಲ್ಲ. ಆರೋಗ್ಯ, ಶಿಸ್ತು, ಏಕಾಗ್ರತೆ, ಗುರಿ ಸಾಧನೆಗೆ ಪೂರಕವಾಗಿರುವ ಯೋಗ ರೂಢಿಸಿಕೊಳ್ಳಲು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕೆಂದು ಜಿಲ್ಲಾ ನಿವೃತ್ತ ನೋಂದಣಾಕಾರಿ ಎಸ್.ಎಸ್. ಹೂವಿನಳ್ಳಿ ಹೇಳಿದರು.
ನಗರದ ಬಸವೇಶ್ವರ ಕಾಲನಿಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ನಿಮಿತ್ತ ಸಾರ್ವಜನಿಕರಿಗಾಗಿ ಆಯೋಜಿಸಿರುವ ಯೋಗ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಎಂ.ಎನ್. ದಿಂಡೂರ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ದೇಶದ ಆಸ್ತಿಯಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಯೋಗ ರೂಢಿಸಿಕೊಳ್ಳಬೇಕು ಎಂದರು.
ಯೋಗ ಶಿಕ್ಷಕ ಬಿ.ಎಂ. ಮಸಬಿನಾಳ ಯೋಗದ ಅರ್ಥ ವ್ಯಾಪ್ತಿ, ಯೋಗ ಪಥಗಳು ಹಾಗೂ ಯೋಗದ ನಿಯಮಗಳ ಕುರಿತು ತಿಳಿಸಿದರು. ಸೇವಾ ದಳದ ಜಿಲ್ಲಾಧ್ಯಕ್ಷ ಎಸ್.ಬಿ. ಬಿರಾದಾರ (ಕಡ್ಲೆೇವಾಡ) ಅಧ್ಯಕ್ಷತೆ ವಹಿಸಿದ್ದರು. ಆರ್.ಎ. ಪಾಟೀಲ, ಡಿ.ಬಿ. ಹಿರೇಕುರುಬರ, ನಾಗೇಶ ಡೋಣೂರ ಹಾಗೂ ಬಸವೇಶ್ವರ ಕಾಲನಿ, ವಿದ್ಯಾ ನಗರ ಹಾಗೂ ಗಚ್ಚಿನಕಟ್ಟಿ ಕಾಲನಿ ಯೋಗಾಸಕ್ತರು ಪಾಲ್ಗೊಂಡಿದ್ದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಬಿ. ಹಿರೇಕುರಬರ ಸ್ವಾಗತಿಸಿದರು. ಎ.ಎಸ್. ಡೂಣೂರ ವಂದಿಸಿದರು.

Leave a Reply

Your email address will not be published. Required fields are marked *