More

    ಅನುಭಾವ ಸಾಹಿತ್ಯ ನೆಲದ ಮರೆಯ ಸಂಪತ್ತು

    ವಿಜಯಪುರ: ಅನುಭಾವ ತಿಳಿಸುವ ಮಾತಲ್ಲ, ತಿಳಿಸಿದರೆ ತಿಳಿಯುವುದಿಲ್ಲ. ಅದು ನೆಲದ ಮರೆಯ ಸಂಪತ್ತು ಎಂದು ಡಾ.ಬಸವರಾಜ ಜಗಜಂಪಿ ಹೇಳಿದರು.
    ನಗರದ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಿಂದಿ-ಕನ್ನಡ ವಿಷಯದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರೊ.ಎಸ್.ಎಚ್. ಲಗಳಿ ಅಧ್ಯಕ್ಷತೆ ವಹಿಸಿ, ಅನುಭಾವಿಗಳು ಭೋಗ ಜೀವನ ತೊರೆದು ಜನರನ್ನು ತಿದ್ದುವ ಪ್ರಯತ್ನ ಮಾಡಿದರು. ಅವರ ಪರಿಶ್ರಮಕ್ಕೆ ಬೆಲೆ ಕೊಡಬೇಕು ಎಂದು ಹೇಳಿದರು.
    ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಆರ್.ವಿ. ಪಾಟೀಲ, ಪ್ರೊ.ಎಂ.ಪಿ. ನೀಲಕಂಠಮಠ, ಡಾ.ಬಿ.ಜಿ. ಬಿರಾದಾರ, ಡಾ.ಎಂ.ಎಸ್. ಮದಬಾವಿ, ಡಾ.ಎಸ್.ಟಿ. ಮೆರವಾಡೆ, ಡಾ.ಎಸ್.ಜೆ. ಜಹಾಗೀರದಾರ್, ಡಾ. ನಾಮದೇವ ಗೌಡ, ಡಾ.ಧನ್ಯಕುಮಾರ ಬಿರಾಜದಾರ, ಡಾ.ಗುಲಾಬ ರಾಠೋಡ, ಡಾ.ಮೀನಾಕ್ಷಿ ಪಾಟೀಲ ಮತ್ತಿತರರು ವಿಚಾರ ಮಂಡಿಸಿದರು. ಪ್ರೊ.ಐ.ಎಸ್. ಕಾಳಪ್ಪನವರ, ಡಾ.ಕೆ.ಜಿ. ಪೂಜಾರಿ, ಡಾ.ಆರ್.ಎಂ. ಮಿರ್ದೆ ಉಪಸ್ಥಿತರಿದ್ದರು.
    ಡಾ.ಎಸ್.ಜೆ ಪವಾರ ಸ್ವಾಗತಿಸಿದರು. ಡಾ.ಸುರೇಶ ಸ್ವಾಮಿ ಆಶಯನುಡಿ ಹೇಳಿದರು. ಪ್ರೊ.ಬಿ.ಬಿ. ಡೆಂಗನವರ ಪರಿಚಯಿಸಿದರು. ದೀಪಾ ಲಗಳಿ ವಂದಿಸಿದರು. ಪ್ರೊ. ವಿದ್ಯಾ ಹೀರೆಮಠ ಹಾಗೂ ಡಾ.ಆರ್.ಜಿ. ಕಮತರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts