ಗಾಂಜಾ ವಶ

ವಿಜಯಪುರ: ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದ ಜಮೀನೊಂದರ ಸರಹದ್ದಿನಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸುರೇಶ ದುಂಡಪ್ಪ ಚಿಗರಿ ಎಂಬುವರ ಜಮೀನಿನಲ್ಲಿ ಬೆಳೆದ 15.360 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ ಒಣಗಿದ ಗಿಡದ ತಪ್ಪಲು-ಹೂ ಇದ್ದ ಹಳದಿ ಗೊಬ್ಬರ ಚೀಲವೊಂದು ಸಿಕ್ಕಿದೆ. ಅದರಲ್ಲಿ 13500 ರೂ. ಮೌಲ್ಯದ 3.360 ಕೆಜಿ ಗಾಂಜಾ ಇತ್ತೆಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 61,500 ರೂ. ಮೌಲ್ಯದ ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ. ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *