ವಿಜಯಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಸ್‌ಡಿಪಿಐ ಸಂಘಟನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ಕಾಯ್ದೆ ಹಿಂಪಡೆಯಲು ಆಗ್ರಹಿಸಿದರು.
1948 ಜ.30ರಂದು ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಭಯೋತ್ಪಾದನಾ ಕೃತ್ಯ ನಡೆಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಕೊಂದನು. ಆತ ಗುಂಡಿಟ್ಟಿರುವುದು ಕೇವಲ ಗಾಂಧೀಜಿ ಎದೆಗೆ ಮಾತ್ರವಲ್ಲದೆ ಇಡೀ ರಾಷ್ಟ್ರದ ಹೃದಯಕ್ಕಾಗಿತ್ತು. ಇದೀಗ ಅಂಥದ್ದೇ ಕೃತ್ಯ ಕೇಂದ್ರ ಸರ್ಕಾರ ಎಸಗುತ್ತಿದೆ. ಪರೋಕ್ಷವಾಗಿ ಸಂವಿಧಾನದ ಕಗ್ಗೊಲೆ ನಡೆಸಿದೆ ಎಂದು ಸಂಘಟಕರು ಆಪಾದಿಸಿದರು.
ಜಿಲ್ಲಾಧ್ಯಕ್ಷ ಶಫೀಕ್ ಕನ್ನೂರ, ಪಿಎ್ಐ ಜಿಲ್ಲಾಧ್ಯಕ್ಷ ಕ್ರುದ್ದೀನ್ ಕಲಾದಗಿ, ಭೀಮ ಆರ್ಮಿ ಉಪಾಧ್ಯಕ್ಷ ಖಾಲೀದ ಹುಸೇನ್, ಅಶಾಕ್ ಜಮಖಂಡಿ, ಶಫೀಕ್ ಮುಲ್ಲಾ, ಇಸಾಕ ಸೈಯದ್, ಸಮ್ಮಿವುಲ್ಲಾ ಬಡೆಘರ ಮತ್ತಿತರರಿದ್ದರು.